ಉದಯವಾಹಿನಿ, ಇಸ್ಲಾಮಾಬಾದ್‌: ಅಪ್ಸನ್ ತಾಲಿಬಾನ್ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಇಸ್ತಾನ್‌ಬುಲ್‌ನಲ್ಲಿ ಗುರುವಾರ ಶಾಂತಿ ಮಾತುಕತೆಯನ್ನು ಪುನಾರಂಭಿಸಿದ್ದಾರೆ.ಜನ ತಮ ಅವಕಾಶಗಳಿಗಾಗಿ ತಾವೇ ಮುಂದೆ ಬರಬೇಕು ಶೀಲಾ ಹಾಲ್ಕುರಿಕೆ ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಮತ್ತಷ್ಟು ಉಲ್ಬಣಗೊಳ್ಳದಂತೆ ತಪ್ಪಿಸಲು ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಮಾತುಕತೆ ಮುಂದುವರಿಸಿರುವುದಾಗಿ ತಿಳಿದುಬಂದಿದೆ.
ಅಕ್ಟೋಬರ್ 11ರಂದು ಪಾಕ್ ಹಾಗೂ ಅಫ್ಘನ್ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಸಾವು-ನೋವು ಸಂಭವಿಸಿತ್ತು.
206 ಮಂದಿ ಅಪ್ಸನ್ ತಾಲಿಬಾನಿಗಳು ಹಾಗೂ 110 ಮಂದಿ ತಪ್ರೀಕ್-ಎ-ತಾಲಿಬಾನ್ ಸಂಘಟನೆಯ ಸದಸ್ಯರನ್ನು ಹತ್ಯೆಗೈದಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಜತೆಗೆ ಪಾಕ್‌ನ 23 ಮಂದಿ ಸೈನಿಕರೂ ಯುದ್ಧದಲ್ಲಿ ಮೃತಪಟ್ಟಿದ್ದರು. ಅಕ್ಟೋಬರ್ 15ರಂದು ಕದನವಿರಾಮ ಘೋಷಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!