ಉದಯವಾಹಿನಿ, ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಮಾರ್ಕ್ ಸಾಯಿಸಲು ಡೀಲ್ ಕೊಡುವ ದೃಶ್ಯದಿಂದ ಟೀಸರ್ ಶುರುವಾಗಿದ್ದು, ಮಾರ್ಕ್ ಯಾರು..? ಆತನ ಶಕ್ತಿ ಎಂಥದ್ದು ಅನ್ನುವ ಕುರಿತಂತೆ ಟೀಸರ್ ಉತ್ತರಿಸಲಿದೆ. ಕಿಚ್ಚ ಸುದೀಪ್ ಪಕ್ಕಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ.ಯಾವ ಹಬ್ಬಕ್ಕಾಗಿ ಕಿಚ್ಚನ ಫ್ಯಾನ್ಸ್ ಕಾದು ಕುಳಿತಿದ್ದರೋ ಆ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು. ಇದೀಗ ಮಾರ್ಕ್ ಸಿನಿಮಾದ ಟೀಸರ್ ಬಿಡುಗಡೆಗೆ ಆಗಿದೆ. ಶುಕ್ರವಾರ ಸಂಜೆ 6.45ಕ್ಕೆ ಮಾರ್ಕ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಕಿಚ್ಚನ ಅಭಿಮಾನಿಗಳು ಟೀಸರ್ ನೋಡಿ ಕುಣಿಯುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ಸಕ್ಸಸ್ ಬಿಸಿಯಲ್ಲಿ ಬರ್ತಿರುವ ಮಾರ್ಕ್ ಸದ್ಯದ ಬಹುನಿರೀಕ್ಷಿತ ಪಟ್ಟಿಯಲ್ಲಿರುವ ಸಿನಿಮಾ. ಈಗಾಗ್ಲೇ ಟೈಟಲ್ ಅನೌನ್ಸ್ಮೆಂಟ್ ಟೀಸರ್‌ನಲ್ಲಿ ಕಿಚ್ಚನ ಲುಕ್ ಅಬ್ಬರವನ್ನ ನೋಡಿದ್ದಾಗಿದೆ. ಚಿತ್ರದ ಹಾಡೊಂದು ಕೂಡ ರಿಲೀಸ್ ಆಗಿದೆ. ಸದ್ಯಕ್ಕೀಗ ಚಿತ್ರ ಬಿಡುಗಡೆ ಸನ್ನಿಹಿತದಲ್ಲಿರುವಾಗಲೇ ಟೀಸರ್ ಬಿಡುಗಡೆ ಆಗಿ ಕುತೂಹಲ ಹೆಚ್ಚಿಸಿದೆ.
ಮುಹೂರ್ತದ ದಿನವೇ ಇದೇ ಡಿಸೆಂಬರ್ 25ಕ್ಕೆ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದರು ಕಿಚ್ಚ. ಅದರ ಪ್ರಕಾರ `ಮಾರ್ಕ್’ ಸಕಲ ರೀತಿಯಲ್ಲೂ ಸಿದ್ಧವಾಗಿದ್ದು, ಕಿಚ್ಚ ರಾತ್ರಿ ಹಗಲೆನ್ನದೇ ಶೂಟಿಂಗ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಜೋರಾಗಿ ನಡೆಯುತ್ತಿದ್ದು, ರಿಲೀಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ವಿಚಾರ ಈಗಾಗಲೇ ಸ್ಪಷ್ಟವಾಗಿದೆ. ಒಟ್ನಲ್ಲಿ ಕಿಚ್ಚನ ಫ್ಯಾನ್ಸ್‌ಗೆ ಇದು ಅಸಲಿಯಾಗಿ ಮನರಂಜನಾ ಹಬ್ಬ.
