ಉದಯವಾಹಿನಿ, ಕ್ಯೂಟ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಇತ್ತೀಚೆಗಷ್ಟೇ ತಮ್ಮ ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡು ಮದುವೆಗೆ ಅಣಿಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಫೆಬ್ರವರಿಯಲ್ಲೇ ಮದುವೆ ನಡೆಯುತ್ತೆ ಅನ್ನೋದು ಬಹುತೇಕ ಖಚಿತವಾದಂತಾಗಿದೆ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಅನ್ನೋದು ಆಪ್ತಮೂಲಗಳ ಮಾಹಿತಿ.
ಸಹಜವಾಗಿ ದಕ್ಷಿಣ ಭಾರತದಲ್ಲಿ ಮದುವೆಯನ್ನು ಹುಡುಗಿಯ ಮನೆಯವರೇ ನಡೆಸಿಕೊಡುವುದರಿಂದ ರಶ್ಮಿಕಾ ಅವರ ತವರೂರಾದ ಕೊಡಗಿನಲ್ಲೇ ಮದುವೆ ನಡೆಯುಬಹುದು ಎಂದು ಕೆಲವರು ಊಹಿಸಿದ್ದರು. ಇನ್ನೂ ಕೆಲವರು ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಈಗ ಹೆಚ್ಚು ಸಕ್ರಿಯವಾಗಿರುವುದರಿಂದ ಮದುವೆ ಹೈದರಾಬಾದ್ ನಲ್ಲೇ ನಡೆಯಬಹುದು ಎಂದು ಊಹಿಸಿದ್ದರು. ಆದ್ರೆ ಇವರಿಬ್ಬರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರ ಹುಡುಕಾಟದಲ್ಲಿ ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹುಡುಕಾಟ ನಡೆಸಿದೆ. ಮೂರು ಪ್ಯಾಲೇಸ್ ಹೋಟೆಲ್‌ಗಳನ್ನ ಫೈನಲೈಸ್ ಮಾಡಲಾಗಿದ್ದು ಅವುಗಳಲ್ಲೊಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.
ಮಾಧ್ಯಮಗಳಿಗೆ ಈ ವಿಚಾರದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ನೀಡಿರುವುದು ವಿಜಯ್ ದೇವರಕೊಂಡ ಅವರ ಆಪ್ತರು ಎಂದು ಹೇಳಲಾಗಿದೆ. ಬರುವ ಫೆಬ್ರವರಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ. ಮದುವೆಗೆ ಬೇಕಾದ ಎಲ್ಲಾ ವಸ್ತ್ರಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಅದೂ ಸೇರಿದಂತೆ ಆಮಂತ್ರಣ ಪತ್ರಿಕೆಯ ಡಿಸೈನ್ ಬಗ್ಗೆಯೂ ಚರ್ಚೆಗಳು ಸಾಗಿವೆ ಎಂದು ಹೇಳಲಾಗಿದೆ.
