ಉದಯವಾಹಿನಿ, ಯಾದಗಿರಿ: ಶಹಾಪುರದಲ್ಲಿ ಧಮ್ಮಪದ ಮತ್ತು ಪಾಲಿಬಾಷೆ ಕಲಿಕೆ ವೇದಿಕೆ – ಕರ್ನಾಟಕ ದ ವತಿಯಿಂದ ಒಂದು ದಿನದ ಧಮ್ಮ ಶಿಬಿರವನ್ನು ಭಾನುವಾರ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿಯಲ್ಲಿ ನಡೆಯಿತು. ಶಿಬಿರದ ಪಂಜ ಬಂತೆ ಮಹಾಧರೋ ಧಮ್ಮನಂದ ಅವರು ಅಧ್ಯಕ್ಷತೆವಹಿಸಿ ಮಾತನಾಡಿದ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿ ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 33ಕ್ಕೂ ಹೆಚ್ಚು ಬೌದ್ಧ ಬಿಕ್ಕು-ಬಿಕ್ಕುಣಿಯರು ಭಾಗವಹಿಸಿ ಬೌದ್ಧ ಧಮ್ಮದ ಹಲವು ವಿಷಯಗಳ ಕುರಿತು ಚಿಂತನ- ಮಂಥನ ನಡೆಯಿತು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮದ ಪ್ರಚಾರ ಮತ್ತು ಬೌದ್ಧ ಸಂಸ್ಕೃತಿಯ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯದಲ್ಲಿ ಬೌದ್ಧ ಧರ್ಮಿಯರ ಸರ್ವಾಂಗೀಣ ಅಭಿವೃದ್ಧಿಗಾಗಿ (ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ) ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ಇದೆ ವರ್ಷದ ಬಜೇಟ್ ನಲ್ಲಿ ಕನಿಷ್ಠ 500 ಕೋಟಿ ರೂ.ಗಳನ್ನು ಮೀಸಲಿಡಬೇಕು.
ಬಾಬಾ ಸಾಹೇಬ ಅಂಬೇಡ್ಕರವರ ಅನುಯಾಯಿಗಳಿಗೆ ಪರಿಶಿಷ್ಟ ಜಾತಿಗಳ ಕಾಯ, ಸಂವಿಧಾನ ತಿದ್ದುಪಡಿ 1990 ಪ್ರಕಾರ, ಕಂದಾಯ ಇಲಾಖೆಯ ಅಟಲ್ ಜನಸ್ನೇಹಿ ನಿರ್ದೇಶನದ ಮೂಲಕ ನೀಡುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ನಮೂನೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದು ಮಾಡಲು ಕೂಡಲೇ ಆನ್‌ಲೈನ್‌ನಲ್ಲಿ ಅವಕಾಶ ಮಾಡಿಕೊಡಬೇಕು. ಶಹಾಪೂರದ ಬುಡ್ಸ್ ಮಲಗಿದ ಬೆಟ್ಟ, ದೃಶ್ಯ ನೋಡಲು ಅಡ್ಡಿಯಾಗಿರುವ ಅನಧಿಕೃತವಾಗಿ ಖಾಸಗಿ ಕೃಷಿ ಭೂಮಿಯಲ್ಲಿ ಹಾಕಿರುವ ಗ್ರಾನೈಟ್ ಅಂಗಡಿ ಶೆಡ್ ಕೂಡಲೇ ತೆರವುಗೊಳಸಬೇಕು. ಹಿಂದೆ ದಿನಾಂಕ 27-10-2021ರಂದ (ನಿರ್ಣಯ ಸಂಖ್ಯೆ 56) ಶಹಾಪೂರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿರುವಂತೆ ಈ ಸ್ಥಳವನ್ನು ಸುಮಾರು 50 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪರಿಸಬೇಕು. ಎಂದು ಅನೇಕ ನಿರ್ಣಯಗಳು ತೆಗೆದುಕೊಳ್ಳಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಬಂತೋಜಿಗಳು ಬಂತೇ ಮಹಾಥೇರೋ ಧಮ್ಮನಾಗ, ಬಂತೇ ಮಹಾಥೇರೋ ಧಮ್ಮನಂದ, ಬಂತೇ ಥೇರೋ ಜ್ಞಾನ ಸಾಗರ, ಬಂತೇ ಸೋಲಿನಿಂದ, ಬಂತೇ ಮೆತ್ತಪಾಲ, ಬಂತೇ ಧಮ್ಮದೀಪ, ಬಂತೇ ಜ್ಯೋತಿ, ಬಿಕ್ಕುಣಿ ಅಯ್ಯಜಿ ಸುಮನ್, ಬಿಕ್ಕುಣಿ ಅಯ್ಯಜಿ ಗೋತಮಿ, ಬಿಕ್ಕುಣಿ ಅಯ್ಯಜಿ ಸಂಘಮಿತ್ರ, ಮತ್ತು ಇತರ ಒಟ್ಟು 33 ಬಿಕ್ಕು ಬಿಕ್ಕುಣಿ ಸಂಘದ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಬುದ್ಧ ಘೋಷ ದೇವೇಂದ್ರ ಹೆಗಡೆ, ರಣಧೀರ ಹೊಸ್ಮನಿ, ನೀಲಕಂಡ ಬಡಿಗೇರ, ಮರೆಪ್ಪ ಬುಕ್ಕಲ, ಬಾಬುರಾವ್ ಭುತಾಳಿ, ಭೀಮರಾಯ ಹೊಸ್ಮನಿ, ಡಾ. ರವೀಂದ್ರನಾಥ ಹೊಸ್ಮನಿ, ಶಾಯಿಬಾಬ ಅಣಬಿ, ಹಣಮಂತ ಕಾಂಬೆ, ಅರವಿಂದ ಭೋದ್, ನವೀನ್ ಭೋದ್, ಮರೆಪ್ಪ ಜಾಲಿಮಂಜಿ, ಸಿದ್ರಾಮಪ್ಪ ಅನವಾರ, ಮರೆಪ್ಪ ಕನ್ಯಾಕೋಳೂರ, ರಾಮಣ್ಣ ಸಾಧ್ಯಪೂರ, ಸೇರಿದಂತೆ ಇತರರು ಇದ್ದರು.

ಈ ಶಹಾಪುರ ಬೆಟ್ಟದ ಮೇಲೆ ಮಲಗಿರುವ ಬುದ್ಧ ನ ಪವಿತ್ರ ಸ್ಥಳವಾಗಿದೆ ಇಲ್ಲಿ ಇನ್ನೂ ಬಹಳಷ್ಟು ಅಭಿವೃದ್ಧಿಯಾಗಬೇಕಾಗಿದೆ ಬರಿ ನಾಲ್ಕು ಎಕರೆ ಭೂಮಿ ಸರಕಾರ ಈ ಬುದ್ಧ ವಿಹಾರಕ್ಕೆ ನೀಡಲಾಗಿದೆ ಈ ಕರ್ನಾಟಕದಲೇ ಬುದ್ದನ ಆಕಾರದಲ್ಲಿನ ಮಲಗಿರುವವುದು ನೋಡಿದರೆ ಇನ್ನೂ ನೋಡಬೇಕು ಎನ್ನುವುದು ಮನಸ್ಸಿಗೆ ಸಮಾಧಾನ ತರುವಂತಹ ಇಂತಹ ಒಂದು ಸ್ಥಳ ಇಷ್ಟು ಅಭಿವೃದ್ಧಿ ಮಾಡಬೇಕು ಸರಕಾರ. ಈ ಸ್ಥಳವನ್ನು ಸುಮಾರು 50 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪರಿಸಬೇಕು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಇನ್ನೂ ಬಹಳಷ್ಟು ಅಭಿವೃದ್ಧಿಯಾಗಬೇಕು ಬೇರೆ ಬೇರೆ ಜಿಲ್ಲೆಗಳಿಂದ ನೋಡಲು ಪ್ರವಾಸಿಗರು ಬರುವಂತಹ ಒಳ್ಳೆಯ ಪ್ರವಾಸ ತಾಣವನ್ನಾಗಿ ಮಾಡಬೇಕು.
