ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ವಿವಿಧ ಸಂಘಟನೆಗಳ ಒಕ್ಕೂಟದಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಜಲ್ಪಂತ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತರಾದ ಹಾಶಪ್ಪಾ ಅವರಿಗೆ ತಹಸೀಲ್ ಕಾರ್ಯಾಲಯದಲ್ಲಿ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದೇವೆ ಎಂದು ಹೋರಾಟಗಾರ ಮಾರುತಿ ಗಂಜಗಿರಿ ತಿಳಿಸಿದ್ದಾರೆ.
ಬೇಡಿಕೆಗಳು:- ತಾಲ್ಲೂಕಿನ ಐ.ಪಿ ಹೋಸಳ್ಳಿ ಗ್ರಾಮದಲ್ಲಿ 6ಶಾಲಾ ಕೋಠಡಿಗಳು ನಿರ್ಮಿಸಲಾಗಿದ್ದು ಕಾರಣಾಂತರಗಳಿಂದ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲಾ ಕಾರಣ ಹಳೆಯದಾದ ಶಾಲಾ ಕೊಠಡಿಯಲ್ಲಿಯೇ 33 ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾಣ ಕೈಯಲ್ಲಿ ಹಿಡಿದುಕೊಂಡು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಚಿಮ್ಮನಚೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 9ಜನರಿಗೆ ಕಾಲರಾ ರೋಗ ಪತ್ತೆಯಾಗಿದ್ದು ತಾಲೂಕಿನಾದ್ಯಂತ ಮುಂಜಾಗೃತಾ ಕ್ರಮ ವಹಿಸಬೇಕು.
ವಿವಿಧ ಇಲಾಖೆಗಳ ವತಿಯಿಂದ ನಡೆಯುತ್ತಿರುವ ಪ್ರತಿಯೊಂದು ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು, ವಸತಿ ನಿಲಯಗಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಬೇಕು, ವೆಂಕಟಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಾಗಿಲು-ಕಿಟಕಿಗಳಿಲ್ಲದೆ ರಾತ್ರಿ ಹಂದಿ ನಾಯಿಗಳ ವಾಸ ಸ್ಥಾನವಾಗಿದ್ದು ದುರಸ್ತಿಗೊಳಿಸಿ ಸಮಸ್ಯೆ ಬಗೆಹರಿಸಬೇಕು, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಕಡಿಮೆಯಾಗದಂತೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಮಾರುತಿ ಗಂಜಗಿರಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಚಿನ್ನಾ ವೆಂಕಟಾಪುರ, ಗೋಪಾಲ ಗಾರಂಪಳ್ಳಿ, ಘಮ್ಮು ರಾಠೋಡ್, ಸಂದೀಪ ದೇಗಲ್ಮಡಿ, ಮೌನೇಶ್ಮು ಸ್ತಾರಿ, ಪ್ರಶಾಂತ, ಜೈರಾಮ, ಸಿದ್ದಾರ್ಥ್, ಅನೇಕರಿದ್ದರು.
