ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಉಂಟಾಗುವ ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ಬೆಂಕಿ ದುರಂತಕ್ಕೆ 20 ಮಂದಿ ಬಲಿಯಾದರು. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ ಬಳಿಯ ಚೆವೆಲ್ಲಾದಲ್ಲಿ ಆದ ಹೆದ್ದಾರಿ ಅಪಘಾತಕ್ಕೆ 19 ಪ್ರಯಾಣಿಕರು ಅಸುನೀಗಿದರು. ಭಾರತದ ಮಾರಕ ರಸ್ತೆ ಅಪಘಾತಗಳಲ್ಲಿ ಇದು ದಾಖಲೆಯನ್ನು ಬರೆದಿದೆ. ಜಲ್ಲಿಕಲ್ಲು ತುಂಬಿದ ಟ್ರಕ್‌ನ ಚಾಲಕ ಗುಂಡಿಯನ್ನು ತಪ್ಪಿಸಲು ಹೋಗಿ ಬಸ್‌ಗೆ ಡಿಕ್ಕಿ ಹೊಡೆದ. ಜಲ್ಲಿಕಲ್ಲು ಬಸ್ ಮೇಲೆ ಹರಡಿ ಪ್ರಯಾಣಿಕರು ಮೃತಪಟ್ಟರು. ಮತ್ತೊಂದೆಡೆ, ಜೈಪುರದಲ್ಲಿ ಅತಿವೇಗದಲ್ಲಿ ಚಲಿಸಿದ ಡಂಪರ್ ಟ್ರಕ್ 12ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು 14 ಜನರು ಸಾವನ್ನಪ್ಪಿದರು. ಫಲೋಡಿಯಲ್ಲಿ ಟ್ರಕ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು 15 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಭಾರತ ಬೆಳೆದಂತೆ, ವಾಹನಗಳ ಬಳಕೆಯೂ ಹೆಚ್ಚುತ್ತಿದೆ. ಪ್ರತಿ ವರ್ಷ ಹೆಚ್ಚು ಹೆಚ್ಚು ಕಾರುಗಳು, ಬೈಕ್‌ಗಳು ಮತ್ತು ಟ್ರಕ್‌ಗಳು ರಸ್ತೆಗಿಳಿಯುತ್ತಿವೆ. ಇಂತಹ ಭೀಕರ ಅಪಘಾತಗಳಿಗೆ ಅತಿ ವೇಗವೇ ಕಾರಣ ಎಂದು ವರದಿಗಳು ಹೇಳುತ್ತಿವೆ. ದೇಶದಲ್ಲಾಗುತ್ತಿರುವ ಪ್ರತಿ ಎರಡು ಅಪಘಾತಗಳಲ್ಲಿ ಒಂದು ಸಾವು ಸಂಭವಿಸುತ್ತಿದೆ. ಕಳೆದ ವರ್ಷ ಒಟ್ಟಾರೆ ರಸ್ತೆ ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆಯಲ್ಲಿ ಉತ್ತರ ಪ್ರದೇಶದ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕ ಟಾಪ್ 5ರ ಸ್ಥಾನದಲ್ಲಿರುವುದು ಆತಂಕಕಾರಿ ವಿಚಾರ.
2024ರ ಅಂಕಿ-ಅಂಶ ಹೇಳೋದೇನು?: 2024 ರಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) 4.73 ಲಕ್ಷ ರಸ್ತೆ ಅಪಘಾತಗಳು ಮತ್ತು 1.70 ಲಕ್ಷ ಸಾವುಗಳು (ಪಶ್ಚಿಮ ಬಂಗಾಳ ಹೊರತುಪಡಿಸಿ) ಸಂಭವಿಸಿವೆ ಎಂದು ಸಚಿವಾಲಯದ ಸಾರಿಗೆ ಸಂಶೋಧನಾ ವಿಭಾಗ (TRW) ವರದಿ ತಿಳಿಸಿದೆ. ಇದು ತಾತ್ಕಾಲಿಕ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!