ಉದಯವಾಹಿನಿ, ವಾಷಿಂಗ್ಟನ್: 1980ರ ದಶಕದ ಆರಂಭದಲ್ಲಿ ಭಾರತ ಮತ್ತು ಇಸ್ರೇಲ್ ಒಟ್ಟಾಗಿ ಪಾಕಿಸ್ತಾನದ ಕಹುತಾ ಅಣು ಸ್ಥಾವರದಮೇಲೆ ಗುಪ್ತ ಬಾಂಬ್ ದಾಳಿ ನಡೆಸುವ ಯೋಜನೆ ರೂಪಿಸಿದ್ದವು. ಈ ದಾಳಿಯ ಉದ್ದೇಶ ಇಸ್ಲಾಮಾಬಾದ್‌ನ ಅಣ್ವಸ್ತ್ರ ನಿರ್ಮಾಣವನ್ನು ತಡೆಯುವುದಾಗಿತ್ತು. ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತಿತ್ತು ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಅಭಿಪ್ರಾಯಪಟ್ಟಿದ್ದಾರೆ.
ಆಗಿನ ಭಾರತ ಸರ್ಕಾರವು ಕಾರ್ಯಾಚರಣೆಯನ್ನು ನಿರಾಕರಿಸಿದ್ದನ್ನು ಅವರು ನಾಚಿಕೆಗೇಡು ಎಂದು ಹೇಳಿದ್ದಾರೆ. 1980ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಪರಮಾಣು ಚಟುವಟಿಕೆಗಳ ಸಮಯದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯಲ್ಲಿದ್ದ ಮಾಜಿ CIA ಸದಸ್ಯ ಬಾರ್ಲೋ, ಗುಪ್ತಚರ ವಲಯಗಳಲ್ಲಿ ವರದಿಯಾದ ಯೋಜನೆಯ ಬಗ್ಗೆ ತನಗೆ ತಿಳಿದಿತ್ತು. ಆದರೆ, ಆ ಅವಧಿಯಲ್ಲಿ ಅವರು ಸರ್ಕಾರಿ ಸೇವೆಯಿಂದ ಹೊರಗಿದ್ದರಿಂದ ನೇರವಾಗಿ ಭಾಗಿಯಾಗಿರಲಿಲ್ಲ ಎಂದು ದೃಢಪಡಿಸಿದರು.
ಪಾಕ್ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಲು ಆಗ ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಒಪ್ಪಿಗೆ ನೀಡಿರಲಿಲ್ಲ. ಇಂದಿರಾ ಗಾಂಧಿ ಅದನ್ನು ಅನುಮೋದಿಸದಿರುವುದು ನಾಚಿಕೆಗೇಡಿನ ಸಂಗತಿ. ಅದು ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸುತ್ತಿತ್ತು. ಈ ಯೋಜನೆಯ ಉದ್ದೇಶ ಪಾಕಿಸ್ತಾನ ತನ್ನ ಅಣುಸ್ತ್ರವನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದು, ವಿಶೇಷವಾಗಿ ಇಸ್ರೇಲ್‌ಗೆ ಗಂಭೀರ ಶತ್ರು ಎಂದು ಪರಿಗಣಿಸಲಾದ ಇರಾನ್‌ಗೆ ಅಣು ತಂತ್ರಜ್ಞಾನ ಹರಿಯುವುದನ್ನು ತಡೆಯುವುದಾಗಿತ್ತು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!