ಉದಯವಾಹಿನಿ, ವಾಷಿಂಗ್ಟನ್: ನಾಲ್ಕು ದಶಕಗಳ ಕಾಲ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಆಗಿದ್ದ ಮೊದಲ ಮತ್ತು ಏಕೈಕ ಮಹಿಳೆ ನ್ಯಾನ್ಸಿ ಪೆಲೋಸಿ ಅವರು ನಿವೃತ್ತಿಯನ್ನು ಘೋಷಿಸಿದ್ದಾರೆ. 2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಅವರು ಗುರುವಾರ ಘೋಷಿಸಿದರು. ಇದು ಅಮೆರಿಕ ರಾಜಕೀಯದ ಒಂದು ಯುಗಾಂತ್ಯಕ್ಕೆ ಸಾಕ್ಷಿಯಾಗಿದೆ. ಕ್ಯಾಲಿಫೋರ್ನಿಯಾದ ಪ್ರೊಪೊಸಿಷನ್ 50 ಅಂಗೀಕಾರದ ಬಳಿಕ ಅವರು, ಕೊನೆಯ ವರ್ಷದ ಸೇವೆಯಲ್ಲಿರುವ ನಾನು ಮುಂದಿನ ಕಾಂಗ್ರೆಸ್‌ನ ಮರುಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿದರು.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಮಹಿಳೆ ನ್ಯಾನ್ಸಿ ಪೆಲೋಸಿ. ಇವರು ಇದೀಗ ವೃತ್ತಿ ಜೀವನವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದ ಪ್ರೊಪೊಸಿಷನ್ 50 ಅಂಗೀಕಾರದ ಬಳಿಕ ಅವರು ವಾಷಿಂಗ್ಟನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಡಿದ ಈ ಘೋಷಣೆ ಡೆಮೋಕ್ರಾಟ್‌ಗಳಿಗೆ ಅಚ್ಚರಿ ಏನು ತರಲಿಲ್ಲ. ಯಾಕೆಂದರೆ ಹಿರಿಯ ಡೆಮೋಕ್ರಾಟ್‌ಗಳು ಇದನ್ನು ಸಾಕಷ್ಟು ಹಿಂದೆಯೇ ನಿರೀಕ್ಷಿಸಿದ್ದರು.
ನ್ಯಾನ್ಸಿ ಪೆಲೋಸಿ ನಿವೃತ್ತಿ ಘೋಷಣೆಯ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಧ್ಯಮವೊಂದರ ಜೊತೆ ಮಾತನಾಡಿ, ನ್ಯಾನ್ಸಿ ಪೆಲೋಸಿಯ ನಿವೃತ್ತಿ ಅಮೆರಿಕಕ್ಕೆ ಒಂದು ದೊಡ್ಡ ವಿಷಯ. ಅವರು ಅಧಿಕಾರದಲ್ಲಿದ್ದಾಗ ದುಷ್ಟರು, ಭ್ರಷ್ಟರು ಮತ್ತು ನಮ್ಮ ದೇಶಕ್ಕೆ ಕೆಟ್ಟ ವಿಷಯಗಳ ಮೇಲೆ ಮಾತ್ರ ಗಮನಹರಿಸಿದರು.
