ಉದಯವಾಹಿನಿ, ಕೆ.ಆರ್.ಪೇಟೆ: ನೀರು ಜೀವಜಲ ಹನಿಹನಿ ನೀರು ಬಹಳ ಅತ್ಯಮೂಲ್ಯವಾದುದು ನೀರನ್ನು ಹಿತವಾಗಿ ಮಿತವಾಗಿ ಬಳಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಕರೆ ನೀಡಿದರು. ಅವರು ತಾಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮದ ಮಾರಮ್ಮ ದೇವಸ್ಥಾನದ ಅನ್ನಪೂರ್ಣೇಶ್ವರಿ ಕೇಂದ್ರದಲ್ಲಿ ನೀರು ಸಂರಕ್ಷಣೆಯ ಬಗ್ಗೆ ಬೀದಿ ನಾಟಕವನ್ನು ತಮಟೆ ಬಾರಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದರು. ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ ಅತ್ಯಮೂಲ್ಯವಾಗಿರುವ ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಗ್ರಾಮಗಳಲ್ಲಿ ನೀರು ಬಳಕೆ ಮಾಡುವಲ್ಲಿ ಜಾಗೃತಿ ವಹಿಸಬೇಕು. ಹನಿ ಹನಿ ಸೇರಿದರೆ ಹಳ್ಳ ಅನ್ನೋ ಹಾಗೆ ಪ್ರತಿಯೊಂದು ಹನಿ ನೀರು ತುಂಬಾ ಅಗತ್ಯ ನೀರನ್ನು ಮನೆ ಹತ್ತಿರ ಬಳಸುವಾಗ ಮಿತವಾಗಿ ಬಳಸಬೇಕು ಮಕ್ಕಳಿಗೂ ಕೂಡ ನೀರಿನ ಬಗ್ಗೆ ಅರಿವು ಮೂಡಿಸಬೇಕು. ಮತ್ತು ಶುದ್ಧ ನೀರನ್ನು ಎಲ್ಲರೂ ಸೇವಿಸಬೇಕು. ಶುದ್ಧ ನೀರನ್ನು ಕುಡಿಯುವ ಮೂಲಕ ನೀವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮೂಕಾಂಬಿಕಾ, ಬಂಡಿಹೊಳೆ ಗ್ರಾಪಂ ನೌಕರ ಅಶೋಕ್, ಒಕ್ಕೂಟದ ಅಧ್ಯಕ್ಷೆ ಅನಿತಾ, ಜ್ಞಾನವಿಕಾಸ ಸಮನ್ವಯಅಧಿಕಾರಿ ಕಾವ್ಯ, ಶ್ರೀರಂಗಪಟ್ಟಣ ಸ್ನೇಹಜೀವಿ ಕಲಾತಂಡದ ಕಲಾವಿದರಾದ ನಾಗರಾಜು ಮತ್ತು ತಂಡದವರು ಸೇವಾಪ್ರತಿನಿಧಿ ವಿಜಿಯಮ್ಮ ಜ್ಞಾನ ವಿಕಾಸ ಸದಸ್ಯರು ಹಾಜರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ತಾಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮದಲ್ಲಿ ನೀರು ಸಂರಕ್ಷಣೆಯ ಬಗ್ಗೆ ಬೀದಿ ನಾಟಕವನ್ನು ತಮಟೆ ಬಾರಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕೆ.ಆರ್.ಪೇಟೆಯಲ್ಲಿ ಖಾಲಿ ಇರುವ ೦೬ ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ೧೫ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡುವ ಸಂಬಂಧ, ಜಿಲ್ಲಾ ಮಟ್ಟದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆ ಸಮಿತಿಯ ತೀರ್ಮಾನದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ.
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತವಾಗಿ ಆಕ್ಷೇಪಣೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸುಭಾಷನಗರ, ಮಿನಿ ವಿಧಾನ ಸೌಧದ ಹತ್ತಿರ, ಕೆ.ಆರ್.ಪೇಟೆ ಇಲ್ಲಿಗೆ ದಿನಾಂಕ:೧೭.೦೭.೨೦೨೩ ರಂದು ಸಂಜೆ:೫-೩೦ರ ಒಳಗಾಗಿ ಸಲ್ಲಿಸಬಹುದಾಗಿದೆ. ನಿಗದಿಪಡಿಸಿದ ಅವಧಿ ಮೀರಿ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಸಿಡಿಪಿಓ ಅರುಣ್‌ಕುಮಾರ್ ತಿಳಿಸಿದ್ದಾರೆ.
