ಉದಯವಾಹಿನಿ, ವಾಷಿಂಗ್ಟನ್: ಒಹಿಯೊ ರಾಜ್ಯದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ನಾಯಕ, ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿವೇಕ್ ಅವರು ಒಹಿಯೊದ ಅತ್ಯುತ್ತಮ ಗವರ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ‘ಟೂತ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ವಿವೇಕ್ ರಾಮಸ್ವಾಮಿ ಅವರಿಗೆ ನನ್ನ ಪೂರ್ಣ ಬೆಂಬಲ ಮತ್ತು ಅನುಮೋದನೆ ಇದೆ. ಅವರು ಎಂದಿಗೂ ನಿಮ್ಮನ್ನು ತಲೆತಗ್ಗಿಸುವಂತೆ ಮಾಡುವುದಿಲ್ಲ’ ಎಂದಿದ್ದಾರೆ.
‘ಅವರು ನನ್ನ ವಿರುದ್ಧ ಸ್ಪರ್ಧಿಸಿದ್ದರು ಎಂಬುದು ಗೊತ್ತಿದೆ. ಅವರಲ್ಲಿ ಏನೋ ವಿಶೇಷತೆಯಿದೆ. ಅವರು ಯುವ, ಬಲಿಷ್ಠ ಮತ್ತು ಜಾಣರಿದ್ದಾರೆ. ಅಲ್ಲದೆ ಅತ್ಯುತ್ತಮ ವ್ಯಕ್ತಿಯಾಗಿದ್ದು, ಅಮೆರಿಕವನ್ನು ನಿಜವಾಗಿಯೂ ಪ್ರೀತಿಸುತ್ತಾರೆ’ ಎಂದು ಹೇಳಿದ್ದಾರೆ.
