ಉದಯವಾಹಿನಿ, ತಮಿಳಿನ ಅದರ್ಸ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟಿ ಗೌರಿ ಕಿಶನ್ ಅವರಿಗೆ ಮುಜುಗರ ಉಂಟಾಗುವಂಥ ಪ್ರಶ್ನೆ ಕೇಳಿ ಯುಟ್ಯೂಬರ್ ಬಾಡಿ ಶೇಮಿಂಗ್ ಮಾಡಿದ್ದರು. ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅಲ್ಲಿಯೇ ತರಾಟೆಗೆ ತೆಗೆದುಕೊಂಡರು ಯುವನಟಿ ಗೌರಿ ಕಿಶನ್. ಇದೀಗ ಬಾಡಿ ಶೇಮಿಂಗ್‌ಗೆ ಒಳಗಾಗಿರುವ ಗೌರಿ ಕಿಶನ್ ಬೆಂಬಲಕ್ಕೆ ತಮಿಳು ಚಿತ್ರರಂಗದ ಕೆಲ ಸೆಲೆಬ್ರಿಟಿಗಳು ಬಂದಿದ್ದಾರೆ. ಕೆಲವೊಮ್ಮೆ ನೇರವಾಗಿಯೂ ಇಂತಹ ಮುಜುಗರದ ಸನ್ನಿವೇಶಗಳು ಎದುರಾಗುವುದುಂಟು. ಇತ್ತೀಚೆಗಂತೂ ನಕಲಿ ಪತ್ರಕರ್ತರು, ಕೆಲ ಯೂಟ್ಯೂಬ್ `ಪತ್ರಕರ್ತರ’ ಹಾವಳಿ ಹೆಚ್ಚಾಗಿ ನಟಿಯರು ಮುಜುಗರ ಅನುಭವಿಸುವಂತಾಗಿದೆ. ಇದೀಗ ತಮಿಳಿನ ಜನಪ್ರಿಯ ನಟಿ `96′ ಸಿನಿಮಾದಲ್ಲಿಯೂ ನಟಿಸಿದ್ದ ಗೌರಿ ಕಿಶನ್ ಅವರು ಇಂತಹುದೇ ಒಂದು ಮುಜುಗರದ ಸನ್ನಿವೇಶದಲ್ಲಿ ಸಿಲುಕಿದ್ದರು. ಆದರೆ, ಧೈರ್ಯ ಪ್ರದರ್ಶಿಸಿ, ಬಾಡಿ ಶೇಮಿಂಗ್ ಮಾಡಲು ಮುಂದಾದವನಿಗೆ ಚಳಿ ಬಿಡಿಸಿದ್ದರು. ಆ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.
ಆ ಯುಟ್ಯೂಬರ್ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ್ದ ಗೌರಿ ಕಿಶನ್ ಮಾತಿಗೆ ಪ್ರತಿಯಾಗಿ ಆ ಯುಟ್ಯೂಬರ್ ಮಾತು ಬೆಳೆಸಿ ಜೋರು ಮಾಡಿದ್ದ. ಇದೀಗ ನಟಿ ಗೌರಿಯ ಬೆಂಬಲಕ್ಕೆ ತಮಿಳು ಚಿತ್ರರಂಗದ ನಟಿ ಖುಷ್ಬೂ, ನಿರ್ದೇಶಕ ಪಾ ರಂಜಿತ್, ಚಿನ್ಮಯಿ ಶ್ರೀಪಾದ್, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸೇರಿ ಮುಂತಾದವರು ಸಾಥ್ ನೀಡಿದ್ದಾರೆ. ಜೊತೆಗೆ ಯುಟ್ಯೂಬರ್ ನಡೆಯನ್ನ ಖಂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!