ಉದಯವಾಹಿನಿ, ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಮಂಧಾನ ಸೇರಿದಂತೆ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಐದು ಫ್ರಾಂಚೈಸಿಗಳಿಗೆ ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಗುರುವಾರ ಕೊನೆಯ ದಿನವಾಗಿತ್ತು. ಪ್ರತಿ ಫ್ರಾಂಚೈಸಿಗೆ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು.
ಗರಿಷ್ಠ ಮೂರು ಕ್ಯಾಪ್ಡ್ ಭಾರತೀಯ ಮತ್ತು ಗರಿಷ್ಠ ಇಬ್ಬರು ವಿದೇಶಿ ಆಟಗಾರ್ತಿಯರನ್ನು ಉಳಿಸಿಕೊಳ್ಳಬೇಕಿತ್ತು. ಒಂದು ವೇಳೆ ಫ್ರಾಂಚೈಸಿ ಐವರನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡರೆ, ಅವರಲ್ಲಿ ಕನಿಷ್ಠ ಒಬ್ಬರು ಕ್ಯಾಪ್ಡ್ ಆಗದ ಭಾರತೀಯ ಆಟಗಾರ್ತಿ ಇರಬೇಕೆಂಬ ಷರತ್ತು ವಿಧಿಸಲಾಗಿತ್ತು. ಡಬ್ಲ್ಯೂಪಿಎಲ್ 2026 ಹರಾಜು ಪ್ರಕ್ರಿಯೆ ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ.
ಯಾವ ತಂಡದಲ್ಲಿ ಯಾರು ಉಳಿದುಕೊಂಡಿದ್ದಾರೆ ಮತ್ತು ಅವರಿಗೆ 2026ರ ಒಂದು ಸೀಸನ್‌ಗೆ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಮೃತಿ ಮಂಧಾನ (3.5 ಕೋಟಿ ರೂ.), ರಿಚಾ ಘೋಷ್(2.75 ಕೋಟಿ ರೂ.), ಎಲ್ಲಿಸ್ ಪೆರ್ರಿ(2 ಕೋಟಿ ರೂ.), ಶ್ರೇಯಾಂಕಾ ಪಾಟೀಲ್(60 ಲಕ್ಷ ರೂ.) ಮುಂಬೈ ಇಂಡಿಯನ್ಸ್
ನ್ಯಾಟ್ ಸಿವರ್-ಬ್ರಂಟ್(3.5 ಕೋಟಿ ರೂ.), ಹರ್ಮನ್‌ಪ್ರೀತ್ ಕೌರ್ (2.5 ಕೋಟಿ ರೂ.), ಹೇಲಿ ಮ್ಯಾಥ್ಯೂಸ್ (1.75 ಕೋಟಿ ರೂ.), ಅಮನ್‌ಜೋತ್ ಕೌರ್ (2.5 ಕೋಟಿ ರೂ.), ಕಮಲಿನಿ (50 ಲಕ್ಷ ರೂ.)
