ಉದಯವಾಹಿನಿ, ತುಮಕೂರು: ಬೈಕ್ ಗುದ್ದಿದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದಿದ್ದು, ಹಿಂಬದಿಯಿಂದ ಬಂದ ಕಾರು ಹರಿದು ಮಹಿಳೆ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಬಳಿ ನಡೆದಿದೆ. ಗಂಗಮ್ಮ (49) ಮೃತ ಮಹಿಳೆ. ಕೊತ್ತಗೆರೆ ಗ್ರಾಮದ ಗಂಗಮ್ಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಗುದ್ದಿದೆ. ಬೈಕ್ ಗುದ್ದಿದ ಪರಿಣಾಮ ಗಂಗಮ್ಮ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕಾರು ಗಂಗಮ್ಮ ಮೇಲೆ ಹರಿದು ಸಾವನ್ನಪ್ಪಿದ್ದಾರೆ. ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
