ಉದಯವಾಹಿನಿ, ಗಾಝಾ: ಗಾಝಾದಲ್ಲಿ ಇಸ್ರೇಲ್ ನಿಯಂತ್ರಣದಲ್ಲಿರುವ ರಫಾ ಪ್ರದೇಶದಲ್ಲಿ ಉಳಿದುಕೊಂಡಿರುವ ಹಮಾಸ್ ಹೋರಾಟಗಾರರು ಇಸ್ರೇಲ್ ಗೆ ಶರಣಾಗುವುದಿಲ್ಲ ಎಂದು ಹಮಾಸ್ ನ ಸಶಸ್ತ್ರ ವಿಭಾಗ `ಅಲ್-ಕಸ್ಸಾಮ್ ಬ್ರಿಗೇಡ್’ ರವಿವಾರ ಹೇಳಿದೆ. ಕದನ ವಿರಾಮಕ್ಕೆ ಬೆದರಿಕೆಯೊಡ್ಡಿರುವ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಮಧ್ಯವರ್ತಿಗಳನ್ನು ಒತ್ತಾಯಿಸಿದೆ.
ರಫಾದಲ್ಲಿ ಇನ್ನೂ ಉಳಿದಿರುವ ಹೋರಾಟಗಾರರು ತಮ್ಮ ಶಸ್ತ್ರಾಸ್ತ್ರವನ್ನು ಈಜಿಪ್ಟ್ ಗೆ ಒಪ್ಪಿಸಿ, ಅಲ್ಲಿ ಇರುವ ಸುರಂಗಗಳ ವಿವರವನ್ನು ನೀಡಿದರೆ(ಅದನ್ನು ನಾಶಗೊಳಿಸಲು) ಹೋರಾಟಗಾರರಿಗೆ ಸುರಕ್ಷಿತವಾಗಿ ತೆರಳುವ ಮಾರ್ಗದ ವ್ಯವಸ್ಥೆ ಮಾಡುವ ಪ್ರಸ್ತಾಪವನ್ನು ಮಧ್ಯಸ್ಥಿಕೆ ವಹಿಸಿರುವ ಈಜಿಪ್‌ಟ್‌ನ ನಿಯೋಗವು ಮುಂದಿರಿಸಿದೆ ಎಂದು ರಾಯ್ಸರ್ಸ್ ಗುರುವಾರ ವರದಿ ಮಾಡಿದೆ. ರಫಾದಲ್ಲಿ ಉಳಿದಿರುವ ಸುಮಾರು 200 ಹಮಾಸ್ ಹೋರಾಟಗಾರರ ಕುರಿತ ಪ್ರಸ್ತಾವಿತ ಒಪ್ಪಂದವು ಗಾಝಾದ್ಯಂತ ಹಮಾಸ್ ಪಡೆಗಳ ನಿಶ್ಯಸ್ತ್ರಗೊಳಿಸುವ ವಿಶಾಲ ಪ್ರಕ್ರಿಯೆಯ ಪರೀಕ್ಷೆಯಾಗಿದೆ ಎಂದು ಅಮೆರಿಕಾದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!