ಉದಯವಾಹಿನಿ, ಚಿಕ್ಕಮಗಳೂರು: ಸ್ನೇಹಿತರ ಜೊತೆ ಮದ್ಯ ಸೇವಿಸಿ ಅಪ್ಪನಿಗೆ ಗೊತ್ತಾದ್ರೆ ಬೈಯುತ್ತಾರೆ ಅಂತ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದಲ್ಲಿ ನಡೆದಿದೆ.
ಮೃತನನ್ನ 13 ವರ್ಷದ ಶರಣ್ (ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಶರಣ್ ಮೇಲ್ಪಾಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಮೇಲ್ಪಾಲ್ ಗ್ರಾಮದಲ್ಲಿ ಅದೇ ಗ್ರಾಮಸ್ಥರ ಮದುವೆ ಕಾರ್ಯಕ್ರಮವಿತ್ತು. ಮದುವೆಗೆ ಶರಣ್ ಸೇರಿ ಪೋಷಕರು ಹೋಗಿದ್ದರು.
ಮದ್ವೆ ಮನೆಯಲ್ಲಿ ಶರಣ್ ಸ್ನೇಹಿತರ ಜೊತೆ ಸೇರಿ ಮದ್ಯ ಸೇವಿಸಿದ್ದಾನೆ. ಮದ್ಯ ಸೇವಿಸಿದ ಬಳಿಕ ಕುಡಿದಿರುವುದು ಅಪ್ಪನಿಗೆ ಗೊತ್ತಾದರೆ ಬೈಯುತ್ತಾರೆ ಎಂದು ಮನೆ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನ ಗಮನಿಸಿದ ಪೋಷಕರು ಕೂಡಲೇ ಆತನನ್ನ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲೇ ಬಾಲಕ ಶರಣ್ ಸಾವನ್ನಪ್ಪಿದ್ದಾನೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!