ಉದಯವಾಹಿನಿ, ಪ್ರಧಾನಿ ಮೋದಿಯವರ ಭೇಟಿಯಿಂದ ಭೂತಾನ್ ಮಾಧ್ಯಮಗಳು ಅಚ್ಚರಿಗೊಂಡಿವೆ. ಭೂತಾನ್ ಪತ್ರಿಕೆಯ ಸಂಪಾದಕರು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಮೂಲಕ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ‘ದೆಹಲಿ ಸ್ಫೋಟಗಳ ನಂತರ ಪ್ರಧಾನಿ ಮೋದಿ ಭೂತಾನ್‌ಗೆ ಬರಲು ಸಾಧ್ಯವಾಗುವುದಿಲ್ಲ ಎಂದು ನಾವು ಅಂದುಕೊಂಡಿದ್ದೆವು. ಆದರೆ ಭೂತಾನ್‌ಗೆ ಅವರ ಆಗಮನದಿಂದ ನಮಗೆ ಆಶ್ಚರ್ಯವಾಯಿತು’ ಎಂದು ಅವರು ಬರೆದಿದ್ದಾರೆ.
ತಮ್ಮ ದೇಶದಲ್ಲಿ ಭೀಕರ ದಾಳಿ ನಡೆದರೂ ಬೇರೆ ದೇಶದ ಸಂಬಂಧಕ್ಕೆ ಬೆಲೆ ಕೊಟ್ಟು ತಮ್ಮ ಪ್ರವಾಸವನ್ನು ಮುಂದುವರೆಸಿದ ಪ್ರಧಾನಿ ಮೋದಿಯವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಭೂತಾನ್‌ನ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಈ ಬಾರಿ ಪ್ರಧಾನಿ ಮೋದಿ ಅವರ ಭೇಟಿ ಎರಡೂ ದೇಶಗಳು ಜಂಟಿಯಾಗಿ ನಿರ್ಮಿಸುತ್ತಿರುವ 1020 ಮೆಗಾವ್ಯಾಟ್ ಪುನಸ್ಸಿಂಗ್ಟು ॥ ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲು ಮಾತ್ರವಲ್ಲದೆ, 1972ರಿಂದ ಭೂತಾನ್-ಭಾರತ ಸಂಬಂಧಗಳಲ್ಲಿ ಪ್ರಮುಖ ಶಕ್ತಿಯಾಗಿರುವ ದೊರೆ ಜಿಗ್ಯ ಸಿಂಗೈ ವಾಂಗ್ಟುಕ್ IV ಅವರನ್ನು ಗೌರವಿಸಿದ್ದು ವಿಶೇಷವಾಗಿತ್ತು ಎಂದು ಭೂತಾನ್ ಮಾಧ್ಯಮದ ಸಂಪಾದಕರೊಬ್ಬರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನಿನ ಜನರಿಗೆ ಅಪಾರ ಸಂತೋಷ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಬಹುನಿರೀಕ್ಷಿತ ಭಾಷಣದಲ್ಲಿ, ಗೆಲೆಫು ಮೈಂಡ್‌ಫುಲ್‌ನೆಸ್ ನಗರಕ್ಕೆ ರೈಲ್ವೆ ಸಂಪರ್ಕ ಮತ್ತು ಭಾರತದ ಕಡೆಯಿಂದ ವಲಸೆ ಚೆಕ್‌ಪಾಯಿಂಟ್ ಘೋಷಿಸುವ ಮೂಲಕ ಭೂತಾನಿನ ಜನರಿಗೆ ಅಪಾರ ಸಂತೋಷ ತಂದರು. ಅವರು ನಾಲ್ಕನೇ ರಾಜನಿಗೆ ಗೌರವ ಸಲ್ಲಿಸಿದರು.
