
ಉದಯವಾಹಿನಿ, ಚಿಕ್ಕಬಳ್ಳಾಪುರ: ಅಮೆರಿಕದ ವಾಯುಸೇನೆಯ ಬಿ-1ಬಿ ಲ್ಯಾನ್ಸರ್ ಬಾಂಬರ್ ಯುದ್ಧ ವಿಮಾನದ ಹಾರಾಟ ನಡೆಸುತ್ತಿರುವುದನ್ನು ಕಂಡು ಚಿಕ್ಕಬಳ್ಳಾಪುರದ ಜನತೆ ಬೆಚ್ಚಿಬಿದ್ದಿದ್ದಾರೆ.ಚಿಕ್ಕಬಳ್ಳಾಪುರ ತಾಲೂಕಿನ ಆರೂರು, ಆವಲನಾಗೇನಹಳ್ಳಿ, ಚಿಕ್ಕಪೈಲಗುರ್ಕಿ, ಸೇರಿದಂತೆ ತುಮಕಲಹಳ್ಳಿ ಹತ್ತಾರು ಗ್ರಾಮಗಳ ಮೇಲೆ ಅಮೆರಿಕದ B-1B ಲ್ಯಾನ್ಸರ್ ಬಾಂಬರ್ ಸೂಪರ್‌ಸಾನಿಕ್ ಯುದ್ಧ ವಿಮಾನ ಇಂದು ಹಾರಾಟ ನಡೆಸಿತು. ಇದನ್ನು ಕಂಡ ಜನ ಆತಂಕಕ್ಕೆ ಒಳಗಾದರು.
ಅಂದಹಾಗೆ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನದ ಸದ್ದು ಕೇಳಿ ಜನ ಇದ್ಯಾವುದೋ ಹೆಲಿಕಾಫ್ಟರ್ ಇರಬೇಕು. ಇಷ್ಟು ಸೌಂಡ್ ಬರ್ತಿದೆ ಅಂದ್ರೆ ಕೆಟ್ಟು ಹೋಗಿರಬೇಕು ಎಲ್ಲೋ ಬಿದ್ದು ಹೋಗಿದೆ ಅಂತ ಭಾವಿಸಿದ್ರು. ಹಾಗಾಗಿ ಹತ್ತಾರು ಹಳ್ಳಿಗಳ ಜನ ಹೆಲಿಕಾಪ್ಟರ್ ಬೆಟ್ಟ ಗುಡ್ಡಗಳಲ್ಲಿ ಬಿದ್ದು ಹೋಗಿದೆ ಅಂತ ಬಾಯಿಂದ ಬಾಯಿಗೆ ಮಾತಾಡಿಕೊಂಡು ವದಂತಿ ಹಬ್ಬಿಸಿದ್ದರು. ಆ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ ಪೇರೇಸಂದ್ರ ಪೊಲೀಸರ ಗಮನಕ್ಕೂ ಹೋಗಿ ಠಾಣೆಯ ಪೊಲೀಸರು (Chikkaballapura Police) ಸಹ ನಿಜ ಇರಬಹುದು ಅಂತ ಬೀಟ್ ವ್ಯಾಪ್ತಿಗಳಲ್ಲಿ ಕರೆ ಮಾಡಿ ಮಾಹಿತಿ ಕಲೆ ಹಾಕಿ ಬೆಟ್ಟ-ಗುಡ್ಡಗಳ ಕಡೆ ಹೋಗಿ ಹೆಲಿಕಾಪ್ಟರ್ ಪತನವಾಗಿದೆಯಾ ಅಂತ ಹುಡುಕಾಟ ಸಹ ನಡೆಸಿದ್ದರು.
