ಉದಯವಾಹಿನಿ, ಕಾಲ ಉರುಳಿ, ಜೀವನ ಶೈಲಿ ಬದಲಾದರೂ ಇಂದಿಗೂ ನಮ್ಮ ಆಚಾರ – ವಿಚಾರಗಳು ಹಾಗೇ ಉಳಿದಿವೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಂಪ್ರಾದಾಯವನ್ನು ಅಳವಡಿಸಿಕೊಂಡು ಇಂದಿಗೂ ಆಚರಣೆ ಮಾಡುತ್ತಿದ್ದೇವೆ. ಅವರು ನಂಬಿಕೊಂಡ ನಡೆಸಿಕೊಂಡ ಸಂಸ್ಕೃತಿಯನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಈ ವಾಸ್ತು ಶಾಸ್ತ್ರ ಹೊರತಾಗಿಲ್ಲ. ಬಹಳ ಹಿಂದಿನಿಂದಲೂ ನಮ್ಮ ಪೂರ್ವಜರು ವಾಸ್ತುವಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಮನೆ ಕಟ್ಟುವುದರಿಂದ ಹಿಡಿದು, ಅದರ ವಿನ್ಯಾಸ, ಬಣ್ಣ, ಯಾವ ಮೂಲೆ ಎಲ್ಲಿರಬೇಕು. ಯಾವ ದಿಕ್ಕಿನಲ್ಲಿ ಏನು ಬರಬೇಕು, ಯಾವ ವಸ್ತು ಇಡಬೇಕು, ಇಡಬಾರದು ಹೀಗೆ ಪ್ರತಿಯೊಂದನ್ನು ವಾಸ್ತು ಶಾಸ್ತ್ರದ ನಿಯಮದ ಅನುಸಾರವಾಗಿ ಮಾಡುತ್ತಾ ಬಂದಿದ್ದೇವೆ.
ಆದರೆ ಕೆಲವೊಮ್ಮೆ ಅರಿವಿಗೆ ಬಾರದೇ ಕೆಲ ಅಚಾತುರ್ಯಗಳು ನಡೆದುಹೋಗಿ ಬಿಡುತ್ತವೆ. ವಾಸ್ತುವನ್ನು ಕಡೆಗಣಿಸಿ ಮನೆಯ ಅಂದವನ್ನು ಹೆಚ್ಚಿಸಲು ಎಂದು ತಂದ ಎಷ್ಟೋ ವಸ್ತುಗಳು ಅಶಾಂತಿಯನ್ನು ಸೃಷ್ಟಿಸಿ ಬಿಡುತ್ತದೆ. ಇದಕ್ಕೆ ಮನೆಯಲ್ಲಿ ನೆಡುವ ಸಸ್ಯಗಳು, ಸುತ್ತ ಇರುವ ಮರಗಳು ಹೊರತಾಗಿಲ್ಲ.
ಹೌದು ಕೆಲವರು ಶೋಪೀಸ್ ಆಗಿ ಕಳ್ಳಿ, ಕ್ಯಾಕ್ಟಸ್ ಮೊದಲಾದ ಮುಳ್ಳಿನ ಗಿಡಗಳನ್ನು ತರುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಸಸ್ಯಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಇದು ಮನೆಯ ಸಂತೋಷ ಮತ್ತು ಶಾಂತಿಯನ್ನು ಹಾಳು ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗುಲಾಬಿ ಗಿಡಗಳನ್ನು ಇರುವುದು ಅಶುಭವಾಗಿದೆ. ಇದನೆಲ್ಲಾ ಗಮನಿಸಿದಾಗ ಮತ್ಯಾವ ಗಿಡಗಳು ಇದೇ ಸಾಲಿಗೆ ಸೇರುತ್ತದೆ ಎಂಬ ಯೋಚನೆ ಬರುತ್ತದೆ. ಇದಕ್ಕೆ ಮಧುಮೇಹಕ್ಕೆ ರಾಮಬಾಣವಾಗಿರುವ
ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಅದನ್ನು ಬೆಳೆಸೋದು ಶುಭಕರ. ಸರಿಯಾದ ದಿಕ್ಕಿನಲ್ಲಿ ಪಪ್ಪಾಯ ಗಿಡ ಬೆಳೆಸಿದ್ರೆ ಸಕಾರಾತ್ಮಕ ಶಕ್ತಿ ಕಡಿಮೆ ಆಗೋದಿಲ್ಲ ಜೊತೆಗೆ ಕುಟುಂಬಸ್ಥರ ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮ ಬೀರುವುದಿಲ್ಲ. ಹಾಗಾಗಿ ಪಪ್ಪಾಯ ಗಿಡ ಬೆಳೆಸುವ ಮುನ್ನ ನೀವು, ಅದರ ದಿಕ್ಕು, ವಾಸ್ತು ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳುವುದು ಉತ್ತಮ
