ಉದಯವಾಹಿನಿ, ಬೆಂಗಳೂರು: ಬಿಹಾರ ಚುನಾವಣೆ ಸಮಯದಲ್ಲಿ ದೆಹಲಿಯಲ್ಲಿ ಬ್ಲಾಸ್ಟ್ ಆಗಿರೋದು ಅನುಮಾನಕ್ಕೆ ಕಾರಣವಾಗಿದೆ ಅಂತ ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿ ಬಾಂಬ್ ಸ್ಫೋಟ ಸಂಪೂರ್ಣವಾಗಿ ಭದ್ರತಾ ವೈಫಲ್ಯ. ಬ್ಲಾಸ್ಟ್ ಆದ ಕಾರ್ ಒಂದೇ ಜಾಗದಲ್ಲಿ 5 ಗಂಟೆ ನಿಂತಿತ್ತು ಅಂತ ಹೇಳ್ತಿದ್ದಾರೆ. ಹಾಗಾದ್ರೆ ಯಾಕೆ ಯಾರು ಅದನ್ನ ಪರಿಶೀಲನೆ ಮಾಡಿಲ್ಲ ಅಂತ ಆರೋಪ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ಇಂತಹ ಬಾಂಬ್ ಸ್ಫೋಟ ಯಾಕೆ ಆಗುತ್ತದೆ. ಹಿಂದೆ ಪುಲ್ವಾಮಾ ದಾಳಿ ಆಗಿತ್ತು .ಈಗ ಬಿಹಾರ ಎಲೆಕ್ಷನ್ ಟೈಂಗೆ ಈ ಸ್ಫೋಟ ಆಗಿದೆ. ಅದಕ್ಕೆ ನಮಗೆ ಈ ಸ್ಪೋಟದ ಬಗ್ಗೆ ಅನುಮಾನವಿದೆ. ನಮ್ಮ ನಾಯಕರಿಗೂ ಇದರ ಬಗ್ಗೆ ಡೌಟ್ ಆಗಿದೆ. ಎಲೆಕ್ಷನ್ ಟೈಂನಲ್ಲಿ ಹೀಗೆ ಮಾಡಿ ಸಿಂಪತಿ ಕ್ರಿಯೇಟ್ ಮಾಡ್ತಿದ್ದಾರೆ ಅನ್ನೋದು ನಮ್ಮ ಅನುಮಾನ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕ ರಾಜು ಕಾಗೆಯಿಂದ ಪ್ರತ್ಯೇಕ ರಾಜ್ಯದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜು ಕಾಗೆ ಅಭಿಪ್ರಾಯ ಅವರ ವೈಯಕ್ತಿಕ. ನಾನು ವಿಪ್ ಆಗಿ ಹೇಳ್ತಾ ಇದ್ದೀನಿ ನಮ್ಮ ಪಕ್ಷಕ್ಕೂ ಅವರ ಹೇಳಿಕೆಗೆ ಸಂಬಂಧವಿಲ್ಲ. ನಮ್ಮ ಪಕ್ಷ, ಸಿಎಂ, ಜನ ಯಾರೂ ಅವರ ಹೇಳಿಕೆಯನ್ನು ಒಪ್ಪಲ್ಲ. ಅವರು ಸೀನಿಯರ್ ಲೀಡರ್ ಹಾಗೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆ ಕರ್ನಾಟಕಕ್ಕೆ ಅಪಮಾನ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.
