ಉದಯವಾಹಿನಿ, ಬೀಜಿಂಗ್: ಚೀನಾದ ಜಿಯಾಂಗು ಪ್ರಾಂತ್ಯದಲ್ಲಿ ಇದ್ದ 1500 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದೇವಾಯದ ಕಟ್ಟಡ ಬೆಂಕಿಯ ಕೆನ್ನಾಲಿಗೆಯಲ್ಲಿ ಹೊತ್ತಿ ಉರಿದಿದೆ.
ಇಲ್ಲಿನ ಜಾಂಗ್ಲಿಯಾಗ್ಯಾಂಗ್ ನಲ್ಲಿರುವ 1500 ವರ್ಷಗಳಷ್ಟು ಹಳೆಯದಾದ ಯೋಂಗ್ ಕಿಂಗ್ ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿರುವ ಈ ದೇಲಯ ಹಾಗೂ ಇಲ್ಲಿನ ಸಂಕಿರ್ಣದೊಳಗಿನ ಬಹುಮಹಡಿ ಮಂಟಪಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಮಾಹಿತಿ ಪ್ರಕಾರ ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಬೆಂಕಿ ಅವಘಡಕ್ಕೆ ದೋಷಪೂರಿತ ವೈರಿಂಗ್, ಧೂಪದ ದವ್ಯಗಳ ಬಳಕೆ ಕಾರಣ ಎನ್ನಲಾಗುತಿದು, ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!