ಉದಯವಾಹಿನಿ, ತೆಹರಾನ್ :  ನೀರಿನ ಕೊರತೆ ಮತ್ತು ಭದ್ರತಾ ಆತಂಕದಿಂದಾಗಿ ಇರಾನ್ ದೇಶವು ಈಗ ತನ್ನ ರಾಜಧಾನಿಯನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ಅಧ್ಯಕ್ಷ ಮಸೌದ್ ಪಜೇಶ್ಯಯಾನ್ ಸುಳಿವು ನೀಡಿದ್ದಾರೆ.ಟೆಹ್ರಾನ್ ಪ್ರಸ್ತುತ ಇರಾನ್‌ನ ರಾಜಧಾನಿಯಾಗಿದೆ.ಅಘಾ ಮೊಹಮ್ಮದ್ ಖಾನ್ ಕಜರ್ 1796 ರಲ್ಲಿ ಟೆಹ್ರಾನ್ ಅನ್ನು ರಾಜಧಾನಿಯಾಗಿ ಸ್ಥಾಪಿಸಿದರು.
ಇರಾನ್ ಇಂಟರ್ನ್ಯಾಷನಲ್ ವರದಿ ಪ್ರಕಾರ ಪ್ರಕಾರ, ಟೆಹ್ರಾನ್‌ನಲ್ಲಿ ಈಗ ಕೇವಲ ಏಳು ದಿನಗಳಿಗೆ ಬೇಕಾದ ನೀರು ಉಳಿದಿದೆ. ಈ ಏಳು ದಿನಗಳಲ್ಲಿ ಮಳೆ ಬರದಿದ್ದರೆ, ಟೆಹ್ರಾನ್ ನೀರನ್ನು ಅಮದು ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆ, ಇರಾನ್ ಅಧ್ಯಕ್ಷರು ಜನರನ್ನು ಸ್ಥಳಾಂತರಿಸಲು ಸಿದ್ಧರಾಗುವಂತೆ ಒತ್ತಾಯಿಸಿದ್ದಾರೆ.ಅವರು ಯಾವುದೇ ಸಮಯದಲ್ಲಿ ಟೆಹ್ರಾನ್‌ನಿಂದ ಹೊರಹೋಗುವಂತೆ ಒತ್ತಾಯಿಸಬಹುದು.
ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಸುಮಾರು 1 ಕೋಟಿ ಜನರು ವಾಸಿಸುತ್ತಿದ್ದಾರೆ.ಇದನ್ನು ಇರಾನ್‌ನ ಅತ್ಯಂತ ಹಳೆಯ ಮತ್ತು ಅತ್ಯಂತ ಅಭಿವೃದ್ಧಿ ಹೊಂದಿದ ನಗರವೆಂದು ಪರಿಗಣಿಸಲಾಗಿದೆ. ಇರಾನ್‌ ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇಲ್ಲಿ ವಾಸಿಸುತ್ತಿದ್ದಾರೆ.ಆದಾಗ್ಯೂ ನೀರಿನ ಬಿಕ್ಕಟ್ಟು ಅಲ್ಲಿನ ಜನರ ಜೀವನವನ್ನು ಕಷ್ಟಕರವಾಗಿಸಿದೆ.
ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್‌ನ ಮಕ್ರಾನ್ ಪ್ರಾಂತ್ಯದಲ್ಲಿ ರಾಜಧಾನಿಯನ್ನು ಸ್ಥಾಪಿಸುವ ಬಗ್ಗೆ ಚರ್ಚೆ ಹೆಚ್ಚುತ್ತಿದೆ.ಮಕ್ರಾನ್ ಪಾಕಿಸ್ತಾನದೊಂದಿಗೆ ಗಡಿಯನ್ನು ಸಹ ಹಂಚಿಕೊಂಡಿದೆ. ಇರಾನ್‌ನ ಚಬಹಾರ್ ಬಂದರು ಇಲ್ಲೇ ಇದೆ. ಈ ಇರಾನಿನ ಪ್ರಾಂತ್ಯವು ಹೇರಳವಾದ ನೀರನ್ನು ಹೊಂದಿದೆ. ಮಕ್ರಾನ್ ಪ್ರಾಂತ್ಯವು ಟೆಹ್ರಾನ್ ಗಿಂತ ಸುರಕ್ಷಿತವಾಗಿದೆ. ಇಸ್ರೇಲ್ ಮಕ್ರಾನ್ ಮೇಲೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಿಲ್ಲ. ಇದು ಟೆಹ್ರಾನ್ ನಿಂದ 1000 ಕಿಲೋಮೀಟರ್ ದೂರದಲ್ಲಿದೆ. ಇಸ್ರೇಲಿ ಯುದ್ಧ ವಿಮಾನಗಳು ಅದನ್ನು ತಲುಪುವ ಮೊದಲೇ ನಾಶವಾಗುತ್ತವೆ.
ಇರಾನ್‌ನಲ್ಲಿ ನೀರಿನ ಬಿಕ್ಕಟ್ಟು ಎಷ್ಟು ದೊಡ್ಡದಾಗಿದೆ?
ಅಲ್-ಮಾನಿಟರ್ ಪ್ರಕಾರ. ನೀರಿನ ಕೊರತೆಯಿಂದಾಗಿ ಟೆಹ್ರಾನ್‌ನಲ್ಲಿ ನಲ್ಲಿಗಳು ಬತ್ತಿ ಹೋಗುತ್ತಿವೆ. ಇರಾನ್‌ನ ಎರಡು ದೊಡ್ಡ ನಗರಗಳಾದ ಮಸ್ಟ್ ಹಾದ್ ಮತ್ತು ಟೆಹ್ರಾನ್ ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಟೆಹ್ರಾನ್‌ನ ಕೊನೆಯ ಜಲಾಶಯವೂ ಸಹ ಒಣಗುವ ಹಂತದಲ್ಲಿದೆ. ನವೆಂಬರ್ 3 ರಂದು ಬಿಡುಗಡೆಯಾದ ಉಪಗ್ರಹ ಚಿತ್ರವು ಜಲಾಶಯವು ಈಗ ಕೇವಲ 10 ದಿನಗಳ ನೀರನ್ನು ಮಾತ್ರ ಹೊಂದಿದೆ. ಎಂದು ಸೂಚಿಸುತ್ತದೆ.
ಈ ಹಿಂದಿನ ಸರ್ಕಾರಗಳ ನೀತಿಗಳು, ಹವಾಮಾನ ಬದಲಾವಣೆ ಮತ್ತು ಅತಿಯಾದ ಬಳಕೆಯಿಂದಾಗಿ ಇರಾನ್ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಹಾಗಾಗಿ ಎಲ್ಲರೂ ತಾಳ್ಮೆಯಿಂದಿರಬೇಕು ಎಂದು ಅಧ್ಯಕ್ಷ ಮಸೌದ್ ಪಜೇಶ್ಮಿಯಾನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!