ಉದಯವಾಹಿನಿ, ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳು ಚಿತ್ರರಂಗದಲ್ಲಿ ದೊಡ್ಡ ಘೋಷಣೆಯೊಂದು ಹೊರಬಂದಿತ್ತು. ಸೂಪರ್ ರಜನಿ ಕಾಂತ್, ನಟ ರಾಕ್ಷಸ, ಉಳಗನಾಯಕ ಕಮಲ್ ಹಾಸನ್ ಜೊತೆಯಾಗಿ ನಟಿಸುವ ಬಹುನಿರೀಕ್ಷಿತ ಚಿತ್ರ `ತಲೈವರ್ 173′ ಘೋಷಣೆಯಾಗಿತ್ತು. ಕಾಲಿವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದ ಖುಷ್ಬು ಅವರ ಪತಿ ಸುಂದರ್ ಸಿ, ನಿರ್ದೇಶನ ಮಾಡ್ತಿದ್ದಾರೆ ಅಂತಲೇ ಹೇಳಲಾಗ್ತಿತ್ತು. ಆದ್ರೆ ಸಿನಿ ಚಿತ್ರೀಕರಣ ಶುರುವಾಗುವ ಮೊದಲೇ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಹೌದು. ತಲೈವರ್-173 ರಜನಿಕಾಂತ್ ವೃತ್ತಿ ಬದುಕಿನ ಕೊನೆಯ ಸಿನಿಮಾ ಅನ್ನೋ ಮಾತುಗಳು ಕೇಳಿಬರುತ್ತಿರುವ ನಡುವೆ ಸಿನಿಮಾದ ಬಗ್ಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಪ್ರಾಜೆಕ್ಟ್‌ನಿಂದ ನಿರ್ದೇಶಕ ಸುಂದರ್ ಸಿ. ಹೊರನಡೆಯುವುದಾಗಿ ಘೋಷಿಸಿದ್ದಾರೆ.
ತಲೈವರ್ 173′ ಚಿತ್ರತಂಡದಿಂದ ಹೊರನಡೆಯುತ್ತಿರುವುದಾಗಿ ನಿರ್ದೇಶಕ ಸುಂದರ್ ಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ಮಿಸಿರುವ ಭಾರೀ ನಿರೀಕ್ಷಿತ ಚಿತ್ರತಂಡ ಸುಂದರ್ ಸಿ ಹೊರನಡೆಯಲು ನಿರ್ಧರಿಸಿರೋದಾದ್ರೂ ಏಕೆ ಎಂಬ ಚರ್ಚೆ ಕಾಲಿವುಡ್‌ನಲ್ಲಿ ಜೋರಾಗಿದೆ. ಜೊತೆಗೆ ನಿರ್ದೇಶಕ ಸುಂದರ್ ಸಿ ಪತ್ನಿ ಖುಷ್ಬು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೇಟ್ಮೆಂಟ್‌ನ್ನು ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿರುವುದು ವಿಚಿತ್ರ ಬೆಳವಣಿಗೆಯಾಗಿದೆ.
