ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೆಟ್ರೊ ನಿಲ್ದಾಣ ಸಮೀಪ ಕಾರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಘಟನಾ ಸ್ಥಳದಲ್ಲಿ 9 ಎಂಎಂನ ಮೂರು ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ.ಅಧಿಕಾರಿಗಳ ಪ್ರಕಾರ, ಎರಡು ಕಾರ್ಟ್ರಿಜ್‌ಗಳು ಜೀವಂತ ಗುಂಡುಗಳಾಗಿದ್ದರೆ, ಮೂರನೆಯದು ಖಾಲಿ ಶೆಲ್ ಆಗಿದೆ.9 ಎಂಎಂ ಮದ್ದುಗುಂಡುಗಳನ್ನು ಸಾಮಾನ್ಯವಾಗಿ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ ಬಳಸುವುದರಿಂದ ಈ ಆವಿಷ್ಕಾರ ಮಹತ್ವದ್ದಾಗಿದೆ. ಆದಾಗ್ಯೂ, ಸ್ಥಳದಲ್ಲಿ ಯಾವುದೇ ಪಿಸ್ತೂಲ್ ಅಥವಾ ಶಸಾ್ತ್ರಸ್ತ್ರದ ಭಾಗ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಗುಂಡುಗಳು ಅಲ್ಲಿಗೆ ಹೇಗೆ ಬಂದವು ಎಂಬ ಪ್ರಶ್ನೆಗಳು ಎದ್ದಿವೆ. ನವೆಂಬರ್ 10ರಂದು ಪ್ರಮುಖ ಶಂಕಿತ ಡಾ. ಉಮರ್ ನಬಿ ಚಲಾಯಿಸುತ್ತಿದ್ದ ಹುಂಡೈ ಐ20 ಕಾರಿನ ಸಂಪೂರ್ಣ ಚಲನೆಯನ್ನು ಪತ್ತೆಹಚ್ಚುವ 43 ಸಿಸಿಟಿವಿ ಚಿತ್ರಗಳು ಲಭ್ಯವಾಗಿವೆ.
