ಉದಯವಾಹಿನಿ, ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಶಬರಿಮಲೈನಲ್ಲಿ ಅಯ್ಯಪ್ಪನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಆದರೆ, ಭಾರೀ ಜನಸ್ತೋಮದಿಂದಾಗಿ ಪಂಪಾದಿಂದ ಶಬರಿಮಲೆಗೆ ತಲುಪಲು 7 ಗಂಟೆಗಳು ಬೇಕಾಗಿದ್ದು ಎಲ್ಲಿ ನೋಡಿದ್ರೂ ಜನಜಂಗುಳಿ ಇದೆ. ಅದರಲ್ಲೂ 18ನೇ ಮೆಟ್ಟಿಲು ಹತ್ತಲು ಭಕ್ತರಲ್ಲಿ ನೂಕು ನುಗ್ಗಲು ಶುರುವಾಗಿದೆ. ಬೊಬ್ಬೊಬ್ಬರೂ ಬ್ಯಾರಿಕೇಡ್‌ ಹಾರಿ ಬರ್ತಿದ್ದಾರೆ. ಭಕ್ತರ ನಿಯಂತ್ರಣಕ್ಕೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಕೇಂದ್ರ ತಂಡ ಆಗಮಿಸಲು ಇನ್ನೆರಡು ದಿನ ಬೇಕಾಗಿದ್ದು ಭಕ್ತರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ.

Leave a Reply

Your email address will not be published. Required fields are marked *

error: Content is protected !!