ಉದಯವಾಹಿನಿ, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ `ಜೈ’ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನೂರಕ್ಕೂ ಹೆಚ್ಚು ಶೋಗಳು ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ರಾಜ್ಯಾದ್ಯಂತ ಜೈ ಸಿನಿಮಾಗೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾನೆ. ʻಜೈʼ ಸಿನಿಮಾ ಟೀಮ್ ಎಫರ್ಟ್ ಅನ್ನು ಮೆಚ್ಚಿಕೊಂಡಿದ್ದಾನೆ. ಈಗಾಗಲೇ ನಟನೆಯ ಮೂಲಕ ಪ್ರೇಕ್ಷಕರ ಮನ ಮುಟ್ಟಿರುವ ರೂಪೇಶ್ ಶೆಟ್ಟಿ, ಈ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಗೆದ್ದಿದ್ದಾರೆ.
ತುಳುನಾಡಿನ ರಾಕ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ ಜೊತೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಜೈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ತೆರೆಗೆ ಬಂದಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸುವ ಪ್ರಯತ್ನವಾಗಿತ್ತು. ಅಲ್ಲಿಯೇ ರೂಪೇಶ್ ಶೆಟ್ಟಿ ಅರ್ಧ ಗೆದ್ದಿದ್ರು. ದುಬೈ, ಮಂಗಳೂರು, ಉಡುಪಿ ಭಾಗದಲ್ಲೂ ರಿಲೀಸ್ ಗೂ ಮುನ್ನವೇ ಸಿನಿಮಾದ ಪ್ರೀಮಿಯರ್ ಮಾಡಲಾಗಿತ್ತು. ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗಿದೆ.
ರೂಪೇಶ್ ಶೆಟ್ಟಿ ಸಿನಿಮಾಗೆ ಕನ್ನಡ ಇಂಡಸ್ಟ್ರಿಯ ಬಿಗ್ ಸ್ಟಾರ್ ಗಳೇ ಜೊತೆಯಾಗಿ ನಿಂತಿದ್ದಾರೆ. ಕಿಚ್ಚ ಸುದೀಪ್, ಶ್ರೀಮುರುಳಿ ಸೇರಿದಂತೆ ಹಲವರ ಬೆಂಬಲ ಸಿಕ್ಕಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರು ರೂಪೇಶ್ ಶೆಟ್ಟಿ ಅವರಿಗೆ ಹಣ ನೀಡಿ ಅವರಿಂದಾನೇ ಟಿಕೆಟ್ ಖರೀದಿ ಮಾಡಿದ್ದಾರೆ. 501 ರೂಪಾಯಿ ಕೊಟ್ಟು ಸಿನಿಮಾ ನೋಡುವುದಾಗಿ ಹೇಳಿದ ಕಿಚ್ಚ ಚಿತ್ರತಂಡಕ್ಕೂ ಆಲ್ ದಿ ಬೆಸ್ಟ್ ಹೇಳಿದ್ರು.
