ಉದಯವಾಹಿನಿ, ಬೊಗೋಟಾ: ಸಂಸದ ಸೇರಿದಂತೆ 15 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬುಧವಾರ ಕೊಲಂಬಿಯಾ-ವೆನೆಜುವೆಲಾದ ಗಡಿಯ ಬಳಿ ಪತನಗೊಂಡು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಗಡಿ ನಗರವಾದ ಕುಕುಟಾದಿಂದ ಹೊರಟು, ಮಧ್ಯಾಹ್ನ ಸುಮಾರು (1700GMT) ಹತ್ತಿರದ ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ವಾಯುಯಾನ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ಫ್ಲೈಟ್. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು.

ಕುಕುಟಾ ಪ್ರದೇಶವು ಪರ್ವತಮಯವಾಗಿದ್ದು, ಹವಾಮಾನ ಬದಲಾಗಬಲ್ಲದು. ಈ ಪ್ರದೇಶಗಳು ಕೊಲಂಬಿಯಾದ ಅತಿದೊಡ್ಡ ಗೆರಿಲ್ಲಾ ಗ್ರೂಪ್, ನ್ಯಾಷನಲ್ ಲಿಬರೇಶನ್ ಆರ್ಮಿಯಿಂದ ನಿಯಂತ್ರಿಸಲ್ಪಡುತ್ತವೆ. ಇದು ಸ್ಪ್ಯಾನಿಷ್ ಸಂಕ್ಷಿಪ್ತ ರೂಪ ELN ನಿಂದ ಪ್ರಸಿದ್ಧವಾಗಿದೆ.‌
ವಿಮಾನವನ್ನು ಹುಡುಕಲು ಮತ್ತು ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಿತು. ಒಬ್ಬರು ಸಂಸದ ಮತ್ತು ಒಬ್ಬರು ಚುನಾವಣಾ ಅಭ್ಯರ್ಥಿ ವಿಮಾನದಲ್ಲಿದ್ದರು ಎನ್ನಲಾಗಿದೆ. ಕ್ವಿಂಟೆರೊ ಕೊಲಂಬಿಯಾದ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾಗಿದ್ದಾರೆ. ಸಾಲ್ಸೆಡೊ ಮುಂಬರುವ ಚುನಾವಣೆಗಳಿಗೆ ಅಭ್ಯರ್ಥಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!