ಉದಯವಾಹಿನಿ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಿಯಲ್ ಎಂಟರ್‌ಟೇನರ್ ಅಂದ್ರೆ ಅದು ಗಿಲ್ಲಿ ನಟ ಸಖತ್ ಕಾಮಿಡಿ ಟೈಮಿಂಗ್ ಹೊಂದಿರುವ ಗಿಲ್ಲಿ ಪಂಚಿಂಗ್ ಡೈಲಾಗ್ಸ್‌ಗೆ ದೊಡ್ಡ ಫ್ಯಾನ್ ಬೇಸ್ ಇದೆ. ವ್ಯಂಗ್ಯವಾಗಿ ಕಾಲೆಳೆಯುವ ಗಿಲ್ಲಿ ನಟ ಮಾತುಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವುದೇ ತಯಾರಿ ಇಲ್ಲದೆ ಸ್ಪಾಟ್‌ನಲ್ಲೇ ಕಾಮಿಡಿ ಮಾಡುವ ಗಿಲ್ಲಿ ಪ್ರತಿಭೆಗೆ ಅನೇಕರು ಭೇಷ್ ಎಂದಿದ್ದಾರೆ. ಹೀಗಿರುವಾಗಲೇ, ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಹೋಗಿದೆ. ಹೌದು. ಬಿಗ್ ಬಾಸ್‌ನ ಮಹಿಳಾ ಸ್ಪರ್ಧಿ ರಿಷಾ ಬಟ್ಟೆಯನ್ನ ಮುಟ್ಟಿ ವಾಶ್‌ರೂಮ್‌ನಲ್ಲಿ ಹಾಕಿದ್ದಕ್ಕೆ ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಮಹಿಳೆಯರಿಗೆ ಅವಮಾನ ಮಾಡಿದ್ರಾ ಗಿಲ್ಲ: ಮಹಿಳಾ ಸ್ಪರ್ಧಿಯ ಬಟ್ಟೆ ಮುಟ್ಟಿ ವಾಶ್ ರೂಮಲ್ಲಿ ಹಾಕಿದ್ದಕ್ಕೆ ಕುಶಲ ಎಂಬ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳೆಯರ ವಿರುದ್ಧ ಅವಮಾನಕಾರಿಯಾಗಿ ಗಿಲ್ಲಿ ನಡೆದುಕೊಂಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಮಹಿಳಾ ಆಯೋಗದಿಂದ ಈ ಪ್ರಕರಣ ಪೊಲೀಸ್ ನಗರ ಕಮಿಷನರ್‌ಗೆ ಹಾಗೂ ರಾಮನಗರ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಂಡ ಬಗ್ಗೆ ಶೀಘ್ರದಲ್ಲೇ ಆಯೋಗಕ್ಕೆ ವರದಿ ನೀಡುವಂತೆ ಮಹಿಳಾ ಆಯೋಗ ಪತ್ರ ಬರೆದಿದೆ.
