ಉದಯವಾಹಿನಿ, ಪುಟ್ಟಪರ್ತಿ: ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಅವರು ವೇದಿಕೆಗೆ ಆಗಮಿಸಿದರು. ಈ ವೇಳೆ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮೊದಲು ಮೋದಿ ಅವರ ಪಾದಕ್ಕೆ ಅಡ್ಡಬಿದ್ದು ನಮಸ್ಕರಿಸಿದರು.
ನಮಸ್ಕಾರ ಮಾಡಿದ ನಂತರ ಮೋದಿ ಮತ್ತು ಇತರ ಸಚಿವರ ಸಮ್ಮುಖದಲ್ಲಿ ಐಶ್ವರ್ಯಾ ರೈ ಅವರು ಪ್ರೀತಿ, ಜಾತಿ ಮತ್ತು ಧರ್ಮದ ಬಗ್ಗೆ ಭಾಷಣ ಮಾಡಿದರು. ಒಂದೇ ಜಾತಿ ಇರುವುದು ಅದು ಮಾನವೀಯತೆಯ ಜಾತಿ. ಒಂದೇ ಧರ್ಮ ಇರುವುದು ಅದು ಪ್ರೀತಿಯ ಧರ್ಮ. ಒಂದೇ ಭಾಷೆ ಇರುವುದು ಅದು ಹೃದಯದ ಭಾಷೆ. ಒಂದೇ ದೇವರು ಮತ್ತು ಆತನು ಸರ್ವವ್ಯಾಪಿ ಎಂದು ಹೇಳಿದರು.

ಈ ವಿಶೇಷ ಸಂದರ್ಭದಲ್ಲಿ ನಮ್ಮೊಂದಿಗೆ ಭಾಗಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿಯವರ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕವಾದ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ. ಇಲ್ಲಿ ನಿಮ್ಮ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಪವಿತ್ರತೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸತ್ಯಸಾಯಿ ಬಾಬಾ ಅವರ ಭಕ್ತೆಯಾಗಿರುವ ಐಶ್ವರ್ಯಾ ರೈ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಸ್ಮರಿಸುವ ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!