ಉದಯವಾಹಿನಿ, ನವದೆಹಲಿ: ಚೀನಾ ಸೇರಿದಂತೆ ಎಲ್ಲಾ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಒಕ್ಕೂಟ ಸೇರುವ ಬಗ್ಗೆ ಭಾರತ ಮುಕ್ತ ನಿಲುವು ಹೊಂದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು. ದೆಹಲಿಯಲ್ಲಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ʻಒಂದು ಸೂರ್ಯ – ಒಂದು ಪ್ರಪಂಚ – ಒಂದು ಗ್ರಿಡ್ʼ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಹತ್ತರ ಹೆಜ್ಜೆ ಹಾಕಿದೆ. ವಿಶ್ವದ ನೂರಾರು ರಾಷ್ಟ್ರಗಳು ಭಾರತದ ಸೌರ ಪ್ರಗತಿಗೆ ಮಾರು ಹೋಗಿದ್ದು, ಭಾರತದ ನೇತೃತ್ವದಲ್ಲಿ ಸಾಗಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರತಿನಿಧಿಸುತ್ತವೆ. ಅಂತೆಯೇ ಚೀನಾ ಸೇರಿದಂತೆ ಎಲ್ಲಾ UN ಸದಸ್ಯರು ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಸೇರುವ ಬಗ್ಗೆ ಸಹ ಭಾರತ ಮುಕ್ತ ನಿಲುವು ಹೊಂದಿದೆ ಎಂಬುದನ್ನ ಸ್ಪಷ್ಟಪಡಿಸಿದರು.
ಭಾರತದ ಇಂಧನ ಭದ್ರತೆ ಹಾಗೂ ನಿವ್ವಳ ಶೂನ್ಯಕ್ಕಾಗಿ ಯುಕೆ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್ ಮಿಲಿಬ್ಯಾಂಡ್ ಅವರಿಂದ ಶ್ಲಾಘನೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ನವೀಕರಿಸಬಹುದಾದ ಇಂಧನಕ್ಕಾಗಿ ಜಿ-ನೇತೃತ್ವದ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.
ಭಾರತ ಮೋದಿ ಅವರ ನಾಯಕತ್ವದಲ್ಲಿ ಇಂಧನ ಸುಸ್ಥಿರತೆ ಮಾತ್ರವಲ್ಲ ಭವಿಷ್ಯದ ಪೀಳಿಗೆಗೆ ಮಾದರಿ ಹೆಜ್ಜೆಯಿಡುತ್ತಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಬೆಳಕು ಚೆಲ್ಲುವ ಗುರಿಯೊಂದಿಗೆ ಸಬ್ಸಿಡಿ ಸಹಿತ ಸೌರ ಮೇಲ್ಛಾವಣಿ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ʻಪಿಎಂ ಸೂರ್ಯ ಘರ್ʼ ಒಂದು ವಿದ್ಯುಕ್ತ ಯೋಜನೆಯಾಗಿದೆ ಎಂದು ಮಿಲಿಬ್ಯಾಂಡ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು ಜೋಶಿ.

Leave a Reply

Your email address will not be published. Required fields are marked *

error: Content is protected !!