ಉದಯವಾಹಿನಿ, ತಿರುವನಂತಪುರಂ: ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿ ಜೋರಾಗಿದೆ.
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಸ್ವಾಮಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಭಾರೀ ಭಕ್ತಸಾಗರದಿಂದಾಗಿ ಪಂಪಾ ನದಿಯಿಂದ ದೇಗುಲ ತಲುಪಲು 7 ಗಂಟೆಗಳೇ ಬೇಕಾಗಿದೆ. ಕಣ್ಣು ಹಾಯಿಸಿದ ದೂರವೂ ಸ್ವಾಮಿ ಭಕ್ತರೇ ಇದ್ದಾರೆ. ಭಕ್ತರ ನಿಯಂತ್ರಣಕ್ಕೆ ಕೇಂದ್ರಕ್ಕೆ ಕೇರಳ ಸರ್ಕಾರ ಮನವಿ ಮಾಡಿದೆ. ಕೇಂದ್ರ ತಂಡ ಆಗಮಿಸಲು ಇನ್ನೆರಡು ದಿನ ಬೇಕಾಗಿದ್ದು, ಭಕ್ತರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ.
