ಉದಯವಾಹಿನಿ, ನವದೆಹಲಿ: 2025ರ ನವೆಂಬರ್ 30. ಇದು ಭದ್ರತಾ ಸಿಬ್ಬಂದಿಗೆ ನಕ್ಸಲ್ ಮುಖಂಡನಾಗಿದ್ದ ಮಾದ್ವಿ ಹಿಡ್ಮಾ ಹಿಡಿಯೋಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಟ್ಟಿದ್ದ ಡೆಡ್ ಲೈನ್. ದೇಶದಲ್ಲಿ ನಕ್ಸಲರನ್ನ ಸಂಪೂರ್ಣ ಮಟ್ಟ ಹಾಕುತ್ತೇವೆ ಎಂದು ಭರವಸೆ ನೀಡಿದ್ದ ಅಮಿತ್ ಶಾ ಇದನ್ನ ಕಾರ್ಯರೂಪಕ್ಕೆ ತರಲು ಪ್ಲ್ಯಾನ್ ಮಾಡುತ್ತಲೇ ಇದ್ದಾರೆ.
2025ರ ನವೆಂಬರ್ 30ರೊಳಗೆ ಮಾದ್ವಿ ಹಿಡ್ಮಾನನ್ನು ಮಟ್ಟಹಾಕಲೇಬೇಕು ಎಂದು ಭದ್ರತಾ ಸಿಬ್ಬಂದಿಗೆ ಡೆಡ್ ಲೈನ್ ಕೊಟ್ಟಿದ್ದರು. ಈ ಕಾರ್ಯಾಚರಣೆಗೆ ಇಳಿದ ಭದ್ರತಾ ಸಿಬ್ಬಂದಿ ನಿಗದಿಪಡಿಸಿದ 12 ದಿನ ಮೊದಲೇ ಟಾರ್ಗೆಟ್ ಹಿಟ್ ಮಾಡಿದ್ದಾರೆ. ನಕ್ಸಲ್ ಕಮಾಂಡರ್ ಮಾದ್ವಿ ಹಿಡ್ಮಾನನ್ನು ಮಟ್ಟ ಹಾಕಿದ್ದಾರೆ. ಜೊತೆಗೆ ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕ ಮತ್ತು ಇತರೆ ನಾಲ್ವರು ನಕ್ಸಲರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.
ಕಾರ್ಯಾಚರಣೆ ಶುರು: ನವೆಂಬರ್ 30 ಟಾರ್ಗೆಟ್ ಫಿಕ್ಸ್ ಮಾಡಿದ ಬಳಿಕ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ ಗಢದ ಕಾಡಿನಲ್ಲಿ ಸರ್ಚ್ ಆಪರೇಷನ್ ಶುರು ಮಾಡಿದ್ದರು. ಹಿಡ್ಮಾ ಎನ್ ಕೌಂಟರ್ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
