ಉದಯವಾಹಿನಿ, ಮಂಗಳೂರು:  ನಗರಸಭೆ, ಗ್ರಾಮ ಪಂಚಾಯತ್ ನಕಲಿ ದಾಖಲೆ, ಸೀಲುಗಳನ್ನು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಬಕ ಗ್ರಾಮದ ಕೊಡಿಪ್ಪಾಡಿ ನಿವಾಸಿ ವಿಶ್ವನಾಥ (35) ಎಂದು ಗುರುತಿಸಲಾಗಿದೆ. ವಿಶ್ವನಾಥ ಬಳಿ ಪುತ್ತೂರು ನಗರಸಭೆ, ಸುಳ್ಯ, ಬಂಟ್ವಾಳ, ಕಡಬ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ದಾಖಲೆಗಳು ಪತ್ತೆಯಾಗಿವೆ. ಸಾರ್ವಜನಿಕರು ನೀಡಿದ್ದ ದೂರಿನ ಅನ್ವಯ ಪುತ್ತೂರು ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಯು ಸೀಲು, ಪಂಚಾಯತ್ ಪಿಡಿಓಗಳ ಸಹಿಯನ್ನು ನಕಲಿ ಮಾಡಿ ದಾಖಲೆ ಸಿದ್ಧಪಡಿಸುತ್ತಿದ್ದ. ನಿರಾಕ್ಷೇಪಣಾ ಪತ್ರ, ನಕಲಿ ತೆರಿಗೆ ರಶೀದಿ ಸೇರಿ 50ಕ್ಕೂ ಹೆಚ್ಚು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಪುತ್ತೂರು ತಾಲೂಕು ಪಂಚಾಯತ್ ಸಿಇಓ ದೂರಿನಂತೆ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಹೆಸರಿನ ಶಾಪ್​​ನಲ್ಲಿ ಕಂಪ್ಯೂಟರ್, ಪ್ರಿಂಟರ್ ಇಟ್ಟುಕೊಂಡು ನಕಲಿ ದಾಖಲೆ ಜಾಲ ಕೃತ್ಯ ಎಸಗುತ್ತಿತ್ತು. ಪ್ರಕರಣದಲ್ಲಿ ಪ್ರಭಾವಿಗಳು, ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!