ಉದಯವಾಹಿನಿ, ನವದೆಹಲಿ:  2005ರಿಂದ 15 ವರ್ಷದ ಅವಧಿಯಲ್ಲಿ ಭಾರತದಲ್ಲಿ ಸಾಕಷ್ಟು ಜನರು ಬಡತನದ ಬಂಧ (Poverty) ಕಳಚಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಜುಲೈ 11 ಎಂದು ಪ್ರಕಟವಾದ ಈ ವರದಿ ಪ್ರಕಾರ , 2005 ರ ಏಪ್ರಿಲ್​ನಿಂದ 2020 ರ ಮಾರ್ಚ್​ವರೆಗಿನ ಅವಧಿಯಲ್ಲಿ 41.5 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೇರಿರುವುದು ತಿಳಿದುಬಂದಿದೆ. 2005/06 ರಲ್ಲಿ ಭಾರತದಲ್ಲಿ ಬಡತನ ಶೇ . 55.1 ರಷ್ಟಿತ್ತು . 2019/2021 ರ ಅವಧಿಯಲ್ಲಿ ಇದರ ಪ್ರಮಾಣ ಶೇ . 16.4 ಕ್ಕೆ ಇಳಿಮುಖವಾಗಿದೆ. 2005/06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು ಬಹು ಆಯಾಮಗಳ ಬಡತನಕ್ಕೆ ಸಿಲುಕಿದ್ದರು. 2015/16ರಲ್ಲಿ ಇದು 37 ಕೋಟಿಗೆ ಇಳಿಯಿತು. 2019/21ರಲ್ಲಿ ಈ ಸಂಖ್ಯೆ 23 ಕೋಟಿಗೆ ಬಂದಿದೆ. ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ, ಆಕ್ಸ್​ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಯೋಜನೆ ಸಂಸ್ಥೆಗಳು ಸೇರಿ ಬಿಡುಗಡೆ ಮಾಡಿದ ಮಲ್ಟಿ ಡೈಮನ್ಷನಲ್ ಪಾವರ್ಟಿ ಇಂಡೆಕ್ಸ್ ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 21ನೇ ಶತಮಾನದಲ್ಲಿ ಬಡತನದ ನಿರ್ಮೂಲನೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗಿದೆ. ಅಂದರೆ 2000ರಿಂದ 2022ರವರೆಗೆ ಜಾಗತಿವಾಗಿ 81 ದೇಶಗಳಲ್ಲಿನ ಬಡತನದ ಬಗ್ಗೆ ಅಧ್ಯಯನ ಮಾಡಲಾಗಿದೆ.

ಭಾರತವೂ ಸೇರಿದಂತೆ 25 ದೇಶಗಳು ಬಡತನ ನಿಯಂತ್ರಿಸಲು ಯಶಸ್ವಿಯಾಗಿವೆ. ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು? ಭಾರತ, ಚೀನಾ, ಕಾಂಗೋ, ಹೊಂಡುರಸ್, ಇಂಡೋನೇಷ್ಯಾ, ಮೊರಾಕೋ, ಸರ್ಬಿಯಾ, ವಿಯೆಟ್ನಾಂ ಮೊದಲಾದ 25 ದೇಶಗಳು 15 ವರ್ಷದಲ್ಲಿ ಎಂಪಿಐ ಅನ್ನು ಅರ್ಧದಷ್ಟು ಇಳಿಸಲು ಯಶಸ್ವಿಯಾಗಿವೆ. ವಿಶ್ವಸಂಸ್ಥೆ ಸಿದ್ಧಪಡಿಸಿದ ಈ ಅಧ್ಯಯನ ವರದಿಯಲ್ಲಿ ಜಗತ್ತಿನ 110 ದೇಶಗಳಲ್ಲಿನ 610 ಕೋಟಿ ಜನರ ಪೈಕಿ 101 ಕೋಟಿ ಜನರು ಈಗಲೂ ಬಹುಸ್ತರದ ಕಡುಬಡತನದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಶೇ. 18ರಷ್ಟು ಜನರು ಕಡುಬಡವರಾಗಿದ್ದಾರೆ. ಪ್ರತೀ 6 ಮಂದಿ ಬಡವರಲ್ಲಿ ಐವರು ಆಫ್ರಿಕಾದ ಸಹಾರ ಮತ್ತು ದಕ್ಷಿಣ ಏಷ್ಯಾದ ದೇಶವಾಸಿಗಳಾಗಿರುವುದು ಗಮನಾರ್ಹ. ಚಿಪ್ ಇರುವ ಇ-ಪಾಸ್​ಪೋರ್ಟ್; ಬೆಂಗಳೂರಿನಲ್ಲಿ ಮೊದಲ ಪ್ರಯೋಗ; ಎರಡೇ ದಿನದಲ್ಲಿ ಸಿಗುತ್ತಾ ಪಾಸ್​ಪೋರ್ಟ್? 2020ರಲ್ಲಿ ಉದ್ಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಅಲುಗಾಡಿಸಿದ ಸಂಗತಿ ಎಲ್ಲರಿಗೂ ಗೊತ್ತಿರಬಹುದು. ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆ ಅಧಃಪತನಗೊಂಡಿತ್ತು. ಅಲ್ಲಿಯವರೆಗೂ ಬಡತನದ ನಿರ್ಮೂಲನೆಯ ವೇಗ ಬಹಳ ಹೆಚ್ಚಿತ್ತು ಎಂಬ ಸಂಗತಿಯನ್ನು ವಿಶ್ವಸಂಸ್ಥೆ ಮತ್ತು ಆಕ್ಸ್​ಫರ್ಡ್ ನಡೆಸಿದ ಜಂಟಿ ಅಧ್ಯಯನ ಕಂಡುಕೊಂಡಿದೆ. ಕೋವಿಡ್ ನಂತರ ಪರಿಸ್ಥಿತಿ ಹೇಗೆ ಸಾಗಿದೆ ಎಂಬುದನ್ನು ಈ ಅಧ್ಯಯನದಲ್ಲಿ ಅವಲೋಕಿಸಲಾಗಿಲ್ಲ.

 

Leave a Reply

Your email address will not be published. Required fields are marked *

error: Content is protected !!