ಉದಯವಾಹಿನಿ, ಪೆಶಾವರ: ‘ತೆಕ್-ಇ-ತಾಲಿಬಾನ್ ಪಾಕಿಸ್ತಾನ್’ ಸಂಘಟನೆಯ 15 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ’ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಖೈಬರ್ ಪುಂಖ್ಯಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಹಾಗೂ ಉತ್ತರ ವಝೀರಿಸ್ತಾನ್ ಜಿಲ್ಲೆಗಳಲ್ಲಿ ನ.15 ಮತ್ತು 16ರಂದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.
ಸಂಘಟನೆಯ ಪ್ರಮುಖ ನಾಯಕ ಆಲಂ ಮೆಹ್ಮದ್ ಸೇರಿ 10 ಭಯೋತ್ಪಾದಕರನ್ನು ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಹಾಗೂ ಇತರ ಐವರನ್ನು ಉತ್ತರ ವಝೀರಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ಎಲ್ಲ ಭಯೋತ್ಪಾದಕರು, ಹತ್ಯೆಗೀಡಾದ ಎಲ್ಲ ಭಯೋತ್ಪಾದಕರು, ವಿದೇಶಿ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದೆ.
