ಉದಯವಾಹಿನಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ಭರ್ಜರಿ 50 ದಿನಗಳನ್ನ ಪೂರೈಸಿದೆ. ಈ ಖುಷಿ ಸಂಭ್ರಮವನ್ನ ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಂಡ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈ ಸಿನಿಮಾ ಇಂಗ್ಲೀಷ್ ಭಾಷೆಗೂ ಡಬ್ಬಿಂಗ್ ಆಗಿ ತೆರೆಕಂಡಿದೆ.
ಕಾಂತಾರ ಚಾಪ್ಟರ್-1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನ ಪುಡಿಗಟ್ಟಿ ಇಲ್ಲಿಯವರೆಗೂ ಸುಮಾರು 900 ಕೋಟಿಯನ್ನ ಗಳಿಕೆ ಮಾಡಿದೆ. ಕಾಂತಾರ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಭರ್ಜರಿ ಮೊತ್ತವನ್ನೇ ಕಲೆ ಹಾಕಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ ಸಿನಿಮಾ ಇದಾಗಿದ್ದು, ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ರಿಷಬ್ ಶೆಟ್ಟಿ ಸದ್ಯ ಕಾಂತಾರ ಸಕ್ಸಸ್‌ನ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ನಂತರ ಕಾಂತಾರ ಪಾರ್ಟ್-2 ಕೈಗೆತ್ತಿಕೊಳ್ತಾರಾ..? ಅಥವಾ ಜೈ ಹನುಮಾನ್ ಸಿನಿಮಾವನ್ನ ಮೊದಲು ಮಾಡ್ತಾರಾ..? ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!