ಉದಯವಾಹಿನಿ, ಪಾಲಕ್ ದಾಲ್ ಪಪ್ಪು ಆಂಧ್ರ ಪ್ರದೇಶದ ಒಂದು ಜನಪ್ರಿಯ ಖಾದ್ಯವಾಗಿದೆ. ಇದಕ್ಕೆ ಪಾಲಕ್, ತೊಗರಿಬೇಳೆ/ ಹೆಸರುಬೇಳೆ, ಈರುಳ್ಳಿ, ಟೊಮೆಟೋ, ಮತ್ತು ವಿವಿಧ ಮಸಾಲೆಗಳನ್ನು ಬಳಸಲಾಗುತ್ತದೆ ಮತ್ತು ಕೊನೆಯಲ್ಲಿ ಒಗ್ಗರಣೆ ನೀಡಿ ಅಡುಗೆಗೆ ಫೈನಲ್ ಟಚ್ ನೀಡಲಾಗುತ್ತದೆ.
ಬೇಕಾಗುವ ಪದಾರ್ಥಗಳು
ಪಾಲಕ್ ಸೊಪ್ಪು: 1 ಕಟ್ಟು
ತೊಗರಿಬೇಳೆ: 1 ಕಪ್
ಹೆಸರುಬೇಳೆ: ½ ಕಪ್
ಈರುಳ್ಳಿ: 1 (ಕತ್ತರಿಸಿದ)
ಟೊಮೆಟೋ: 2 (ಕತ್ತರಿಸಿದ)
ಹಸಿ ಮೆಣಸಿನಕಾಯಿ: 6-8
ಅರಿಶಿನ ಪುಡಿ: ಸ್ವಲ್ಪ
ಹುಣಸೆಹಣ್ಣು ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗಾಗಿ
ಎಣ್ಣೆ/ ತುಪ್ಪ: 2-3 ಟೇಬಲ್ ಸ್ಪೂನ್
ಸಾಸಿವೆ: ಸ್ವಲ್ಪ
ಜೀರಿಗೆ: ಸ್ವಲ್ಪ
ಇಂಗು: ಸ್ವಲ್ಪ
ಬೆಳ್ಳುಳ್ಳಿ ಎಸಳು: 5-6 (ಕತ್ತರಿಸಿದ)
ಕ ಕರಿಬೇವಿನ ಸೊಪ್ಪು: ಸ್ವಲ್ಪ
ಒಣ ಕೆಂಪು ಮೆಣಸಿನಕಾಯಿ: 2-3ಮಾಡುವ ವಿಧಾನ
ಪಾಲಕ್ ಸೊಪ್ಪು ಮತ್ತು ಬೇಳೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಕುಕ್ಕರ್‌ನಲ್ಲಿ ತೊಳೆದ ಬೇಳೆ, ಪಾಲಕ್ ಸೊಪ್ಪು, ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿನ ಪುಡಿ ಮತ್ತು ನೀರನ್ನು ಹಾಕಿ 3-4 ವಿಷಲ್ ಹಾಕಿಸ ಬೇಯಿಸಿ. ಬಳಿಕ ಕುಕ್ಕರ್ ತಣ್ಣಗಾದ ನಂತರ, ದಾಲ್ ಅನ್ನು ಚೆನ್ನಾಗಿ ಮ್ಯಾಶ್ ಮಾಡಿ.
