ಉದಯವಾಹಿನಿ, ಮುಂಬೈ: ಉದ್ಯೋಗಿಗಳ ಭವಿಷ್ಯ ನಿಧಿ ((EPF) ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿಯನ್ನು (Revise Salary Limit) ಸದ್ಯದಲ್ಲೇ ಈಗಿರುವ 15 ಸಾವಿರ ರೂ. ನಿಂದ 25,000 ಸಾವಿರ ರೂ.ಗೆ ಏರಿಸುವ ಸಾಧ್ಯತೆ ಇದೆ. ಈ ಸಂಬಂಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುಮೋದನೆ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ 2014ರಲ್ಲಿ ವೇತನ ಮಿತಿಯನ್ನು 6,500 ರೂ.ಗಳಿಂದ ಈಗಿನ 15,000 ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಪಿಂಚಣಿ ಲೆಕ್ಕಾಚಾರದ ವೇತನ ಮಿತಿ ಏರಿಕೆಯಾಗುತ್ತಿದೆ.
ಹೌದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಡಿ ವೇತನ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲು ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಮೊದಲು ಈ ಮಿತಿಯನ್ನು 2014 ರಲ್ಲಿ ಕೇಂದ್ರವು ಹೆಚ್ಚಿಸಿತ್ತು, 2014 ರಲ್ಲಿ, ಸರ್ಕಾರವು ಪಿಎಫ್ ವೇತನದ ಮಿತಿಯನ್ನು 6500 ರಿಂದ 15000 ರೂ.ಗೆ ಹೆಚ್ಚಿಸಿತ್ತು. ಇದೀಗ ಸಾರ್ವತ್ರಿಕ ಸಾಮಾಜಿಕ ಭದ್ರತೆಯತ್ತ ದೊಡ್ಡ ಹೆಜ್ಜೆ ಹಿಡುತ್ತಿದ್ದು, ಲಕ್ಷಗಟ್ಟಲೆ ಸಂಬಳ ಪಡೆಯುವ ವರ್ಗದವರಿಗೆ ಇದರಿಂದ ಅನುಕೂಲವಾಗಲಿದೆ.
ಮುಂಬೈಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಎಂ. ನಗರಾಜು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವೇತನ ಮಿತಿ ಏರಿಕೆ ಒಂದು ಮಹತ್ವ ವಿಷಯವಾಗಿದೆ. ತಿಂಗಳಿಗೆ 15,000ರೂ ಕ್ಕಿಂತ ಸಂಬಳ ಪಡೆಯುವ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು, ಅವರ ಕಡೆಗಾಲದಲ್ಲಿ ಆರ್ಥಿಕ ಸಹಾಯವಿಲ್ಲದೆ ಅವರ ಬದುಕು ದುಸ್ತಿರವಾಗಿರುತ್ತದೆ.
