ಉದಯವಾಹಿನಿ, ಲಖನೌ: “ಸಾವಿರ ಸುಳ್ಳು ಹೇಳಿ ಒಂದು ಮದುವೆ” ಎಂಬ ಮಾತಿದೆ.. ಆದರೆ ಇತ್ತೀಚೆಗೆ ಈ ಮಾತು ನಿಜ ಅನ್ನುವ ಹಾಗಿದೆ. ಕೆಲವೊಬ್ಬರು ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆಯದೇ ಮರುವಿವಾಹ ಆಗಲು ಮುಂದಾಗುವುದು ಇದೆ. ಇಂತಹ ಮದುವೆಯ ಸಂಗತಿಗಳು ಮದುವೆ ಮಂಟಪದ ತನಕ ಹೋಗಿ ಬಳಿಕ ಕ್ಯಾನ್ಸಲ್ ಆಗಿದ್ದು ಇದೆ.. ಅಂತೆಯೇ ವ್ಯಕ್ತಿಯೊಬ್ಬ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಎರಡನೇ ಮದುವೆ ಯಾಗಲು ಹೋಗಿ ತನ್ನ ಪತ್ನಿ ಕೈಗೆ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಪಿರೈಲಾ ಗ್ರಾಮದಲ್ಲಿ ನಡೆದಿದೆ. ವರನ ಮೊದಲ ಪತ್ನಿಯು ತನ್ನ ಗಂಡನ ಮದುವೆಯನ್ನು ನಿಲ್ಲಿಸಲು ಮುಂದಾಗಿದ್ದು ಮದುವೆ ಮಂಟಪ ದಲ್ಲಿ ದೊಡ್ಡ ಹೈ ಡ್ರಾಮವೇ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಗಣೇಶಪುರದ ವಾಲ್ಟರ್‌ಗಂಜ್‌ನ ವಿನಯ್ ಅಂಗದ್ ಶರ್ಮಾ ಅವರಿಗೆ ಪಿರೈಲಾ ಮೂಲದ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 17ರ ರಾತ್ರಿ ವಿವಾಹದ ಅನೇಕ ಕಾರ್ಯಕ್ರಮ ನೆರವೇರಿತ್ತು. ಮದುವೆ ಕಾರ್ಯಕ್ರಮದ ಪ್ರಸಿದ್ಧ ಆಚರಣೆಯಾದ ಜೈಮಾಲಾ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಅದೇ ಸಮಯಕ್ಕೆ ಸರಿಯಾಗಿ ವರನ ಮೊದಲ ಪತ್ನಿ ರೇಷ್ಮಾ ಶರ್ಮಾ ಪೊಲೀಸರೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದು ಈ ದೃಶ್ಯ ವೈರಲ್ ಆಗುತ್ತಿದೆ.
