ಉದಯವಾಹಿನಿ, ತುಮಕೂರು: ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಹಾರೈಸಿ ಅವರ ಅಭಿಮಾನಿಗಳು ಶನಿದೇವರಿಗೆ ತುಲಾಭಾರ ಸೇವೆ ಮಾಡಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಭಿಮಾನಿಗಳು ಪಾವಗಡ ಪಟ್ಟಣದ ಶನಿದೇವರಿಗೆ 91 ಕೆ.ಜಿ. ತೂಕದ ಎಳ್ಳಿನ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಕದನವಿರುವ ಸಮಯದಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲೆಂದು ಪಾವಗಡದಲ್ಲಿ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಹಾರೈಸಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೆ ಇರುವ ಕುಜದೋಷ ಮತ್ತು ಶನಿ ದೋಷಗಳು ದೂರವಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಹಾದಿ ಸುಗಮವಾಗಲೆಂದು ತುಲಾಭಾರ ನಡೆಸಲಾಗಿದೆ. ಇದೇ ವೇಳೆ ದೇವಾಲಯದ ನವಗ್ರಹಗಳಿಗೆ ವಿಶೇಷ ತೈಲಾಭಿಷೇಕವನ್ನು ಸಹ ನೆರವೇರಿಸಿ, ಶಿವಕುಮಾರ್ ಅವರ ರಾಜಕೀಯ ಜೀವನಕ್ಕೆ ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!