ಉದಯವಾಹಿನಿ, ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸಿದ್ದಾರೆ. ತಾಜ್‌ ಮಹಲ್‌ ಸೇರಿದಂತೆ ಹಲವು ಸ್ಥಳಗಳಿಗೆ ಅವರು ಭೇಟಿ ನೀಡಿದರು. ಶುಕ್ರವಾರ ಅವರು ಅನಂತ್ ಅಂಬಾನಿಯವರ ವಿಶಾಲವಾದ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಯೋಜನೆಯಾದ ವಂತಾರಕ್ಕೆ ಭೇಟಿ ನೀಡಿದ್ದಾರೆ. ವಂತಾರವನ್ನು ಅವರು “ವಿಶ್ವದ ಅದ್ಭುತ” ಎಂದು ಕರೆದರು, ಈ ಭೇಟಿ ತಾನು ಹಿಂದೆ ನೋಡಿದ ಯಾವುದಕ್ಕಿಂತ ಭಿನ್ನವಾಗಿತ್ತು ಎಂದು ಅವರು ಹೇಳಿದ್ದಾರೆ. ಭೇಟಿಯ ಸಮಯದಲ್ಲಿ ವಂತಾರದ ಸಿಬ್ಬಂದಿಗಳು ಅವರಿಗೆ, ತೊಂದರೆಗೀಡಾದ ಪ್ರಾಣಿಗಳನ್ನು ಹೇಗೆ ರಕ್ಷಣೆ ಮಾಡಲಾಗುತ್ತದೆ ಎಂಬುದರ ಕುರಿತು ತಿಳಿಸಿದರು.
ಯೋಜನೆಯ ಪ್ರಮಾಣ ಮತ್ತು ವಿವರಗಳಿಂದ ಪ್ರಭಾವಿತರಾದ ಟ್ರಂಪ್ ಜೂನಿಯರ್, ಪ್ರಾಣಿಗಳಿಗೆ ಉತ್ತಮ ರಕ್ಷಣೆ ದೊರೆಯುತ್ತಿದೆ ಎಂದು ಹೇಳಿದ್ದಾರೆ. ಈ ಪ್ರಾಣಿಗಳು ನನಗಿಂತ ಉತ್ತಮವಾಗಿ ಬದುಕುತ್ತವೆ ಎಂದು ತಮಾಷೆ ಮಾಡಿದರು. ಈ ಎಲ್ಲಾ ಪ್ರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ರಕ್ಷಿಸಿ ಮತ್ತು ಅವುಗಳಿಗೆ ಈ ಜೀವನವನ್ನು ನೀಡುವ ದೃಷ್ಟಿಕೋನ, ಸಂರಕ್ಷಣಾ ಪ್ರಯೋಜನ. ನಾನು ಹೇಗೆ ಬದುಕುತ್ತೇನೆ ಎನ್ನುವುದಕ್ಕಿಂತ ಇದು ಉತ್ತಮವಾಗಿದೆ. ನೀವು ಅವುಗಳ ದೃಷ್ಟಿಯಲ್ಲಿ ಬೇರೆಲ್ಲಿಯೂ ನೋಡದ ಜೀವನವನ್ನು ನೋಡುತ್ತೀರಿ” ಎಂದು ಟ್ರಂಪ್ ಜೂನಿಯರ್ ವೀಡಿಯೊ ಸಂದೇಶದಲ್ಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!