ಉದಯವಾಹಿನಿ, ಬಿಗ್‌ಬಾಸ್‌ ಮನೆಯಲ್ಲಿ ನನಗೆ ಮರ್ಯಾದೆ ಸಿಕ್ತಿಲ್ಲ ಅಂತ ಆರೋಪ ಮಾಡಿ ರಾದ್ಧಾಂತ ಸೃಷ್ಟಿಸಿದ್ದ ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್‌ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ವಿಚಾರದಲ್ಲಿ ಸುದೀಪ್‌ ಸೈಲೆಂಟ್‌ ಆಗಿದ್ದಾರೆಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಈ ಆರೋಪಕ್ಕೆ ಕಿಚ್ಚ ತೆರೆ ಎಳೆದಂತೆ ಕಾಣುತ್ತಿದೆ. ಇಂದಿನ ಪ್ರೋಮೊದಲ್ಲಿ ಅಶ್ವಿನಿ ಅವರಿಗೆ ಕಿಚ್ಚ ಹಿಗ್ಗಾಮುಗ್ಗ ಜಾಡಿಸಿದ್ದಾರೆ.
ಕ್ಯಾಪ್ಟನ್‌ ಆಗಿದ್ದ ರಘು ಅವರು ಮನೆ ಕೆಲಸಕ್ಕಾಗಿ ಅಶ್ವಿನಿ ಅವರನ್ನು ಕರೆದಿದ್ದರು. ‘ಬನ್ನಿ ಅಶ್ವಿನಿ.. ಕೆಲಸ ಮಾಡಬನ್ನಿ’ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಅಶ್ವಿನಿ ಬಿಗ್‌ಬಾಸ್ ಮನೆಗೆ ಬಂದು ಸಮಾಜದಲ್ಲಿ ತಮ್ಮ ಸ್ಟೇಟಸ್‌ಗೆ ಧಕ್ಕೆಯಾಗಿದೆ ಎಂದು ಗೋಗರೆದು ಅತ್ತಿದ್ದರು. ಊಟ ಕೂಡ ಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗೋದಾಗಿ ರಾದ್ಧಾಂತ ಮಾಡಿದ್ದರು. ಇಷ್ಟಕ್ಕೆಲ್ಲಾ ಕಾರಣ ಕ್ಯಾಪ್ಟನ್ ಆಗಿದ್ದ ರಘು ತಮ್ಮನ್ನು ಏಕವಚನದಲ್ಲಿ ಕರೆದು ಅವಮಾನ ಮಾಡಿದ್ರು ಅನ್ನೋದಾಗಿ ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ ಆರೋಪ ಮಾಡಿದ್ದರು.
ಇದೇ ವಿಚಾರವನ್ನು ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಮುಂದಿಟ್ಟುಕೊಂಡು ಮಾತನಾಡಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ‘ಏಕವಚನ.. ಏಕವಚನ.. ಏಕವಚನ.. ನಿಮಗೆ ಹೋಗಿ ಬನ್ನಿ ಅಂತ ಅನ್ನಿಸಿಕೊಳ್ಳಬೇಕಾದರೆ, ಪ್ರತಿ ಚಿಕ್ಕ ಮಗುವಿಗೂ ಹೋಗಿ ಬನ್ನಿ ಅನ್ನೋದನ್ನ ಕಲಿಯಿರಿ.. ಮಾತೆತ್ತಿದರೆ, ಯಾವ ಹುಡುಗಿಗೂ ಹೀಗೆ ಕರೆಯಬೇಡಿ ಅಂತೀರಿ. ಯಾರು ಏನು ಮಾತನಾಡಿದ್ದಾರೆ ’ ಎಂದು ಅಶ್ವಿನಿ ಗೌಡಗೆ ಕಿಚ್ಚ ಖಾರವಾಗಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!