ಉದಯವಾಹಿನಿ, ಧಾರವಾಡ: ಆ ದಂಪತಿ ಹೈದ್ರಾಬಾದ್‌ನಲ್ಲಿ ವಂಚನೆ ಮಾಡಿ ಪರಾರಿಯಾಗಿದ್ದರು. ಹೈದ್ರಾಬಾದ್ ಪೊಲೀಸ್ ಠಾಣೆಯೊಂದರ ಕಸ್ಟಡಿಯಲ್ಲಿ ಇದ್ದಾಗಲೇ ಅಲ್ಲಿಂದ ಎಸ್ಕೇಪ್ ಆಗಿದ್ರು. ಕೊನೆಗೂ ಅವರು ಸಿಕ್ಕಿಬಿದ್ದಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ ವಂಚನೆ ಮಾಡಿ ಪೊಲೀಸ್ ಕಸ್ಟಡಿಯಿಂದಲೇ ತಪ್ಪಿಸಿಕೊಂಡು ಬಂದಿದ್ದ ಹೈದರಾಬಾದ್ ಮೂಲದ ವಂಚಕ ದಂಪತಿಯನ್ನ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಈ ದಂಪತಿಯನ್ನ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಲಾಗಿದೆ. ಇವರು ಹುಬ್ಬಳ್ಳಿ, ಧಾರವಾಡ ಬೈಪಾಸ್ ಮೂಲಕ ರಾಮದುರ್ಗದತ್ತ ಹೊರಟಿದ್ದರು. ಈ ವೇಳೆ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತೀಶ್, ಶಿಲ್ಪಾ ಬಂಧಿತ ವಂಚಕ ದಂಪತಿ. ಇವರು ಹೈದ್ರಾಬಾದ್‌ನಲ್ಲಿ ಹಲವರಿಗೆ ವಂಚನೆ ಮಾಡಿ ಪರಾರಿಯಾಗಿದ್ದರು. ಹೈದ್ರಾಬಾದ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಹಲವು ಪ್ರಕರಣ ಕೂಡಾ ದಾಖಲಾಗಿವೆ. ಆದ್ಯಾಗ್ಯೂ ಇವರು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದರು.
