ಉದಯವಾಹಿನಿ, ಬೆಂಗಳೂರು: 100 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಅವರ ಶಾಸಕರನ್ನ ಅವ್ರೇ ಖರೀದಿ ಮಾಡುವ ಕೆಟ್ಟ ವ್ಯವಸ್ಥೆ ಹಿಂದೆಂದೂ ಕಂಡಿರಲಿಲ್ಲ. ಈಗ 100 ಕೋಟಿ ರೂ.ವರೆಗೆ ಕುದುರೆ ವ್ಯಾಪಾರ ನಡೀತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ಹೊರಹಾಕಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಮಾತನಾಡಿ, ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರನಾ..? ಅಥವಾ ಸಮ್ಮಿಶ್ರ ಸರ್ಕಾರನಾ..? ಅನ್ನೋ ಅನುಮಾನ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾವ ಸರ್ಕಾರದಲ್ಲೂ ಈ ರೀತಿ ಆಗಿರಲಿಲ್ಲ. 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದಲ್ಲಿ ಅವರ ಪಕ್ಷದ ಶಾಸಕರನ್ನ ಅವರೇ ಖರೀದಿ ಮಾಡ್ತಿದ್ದಾರೆ. ಇದು ಕೆಟ್ಟ ವ್ಯವಸ್ಥೆ, ಹಿಂದೆಂದೂ ಈ ರೀತಿ ನಡೆದಿಲ್ಲ. ಒಬ್ಬೊಬ್ಬರು ಶಾಸಕರ ಖರೀದಿಗೆ 60 ರಿಂದ 100 ಕೋಟಿ ರೂ. ಕೊಡಲಾಗ್ತಿದೆ. ಜೊತೆಗೆ ಕಾರು, ಫ್ಲ್ಯಾಟು ಗಿಫ್ಟ್ ಕೊಡ್ತಿದ್ದಾರೆ. ಇನ್ನೂ ಯಾರು ಸಿಎಂ ಆಗ್ತಾರೆ? ಅನ್ನೋ ಪ್ರಶ್ನೆಗೆ ಉತ್ತರಿಸಿ, ಅವರು ಯಾರಾದ್ರೂ ಸಿಎಂ ಆಗಲಿ ನಮಗೇನು? ಒಳ್ಳೆ ಸರ್ಕಾರ ಕೊಟ್ಟರೆ ಸಾಕು. ಕುದುರೆ ವ್ಯಾಪಾರ ಮಾಡಿ ಸಿಎಂ ಆಗೋದು ವರ್ಸ್ಟ್. ಸಿದ್ದರಾಮಯ್ಯ ತಮ್ಮ ಕಡೆಯವರನ್ನ ಹಿಡಿದಿಟ್ಟುಕೊಳ್ಳಲು ಕಸರತ್ತು ಮಾಡ್ತಿದ್ದಾರೆ. ಒಟ್ಟಿನಲ್ಲಿ ಸಿಎಂ ಬದಲಾಗೋದು 100% ಗ್ಯಾರಂಟಿ ಅಂತ ಅಶೋಕ್ ಭವಿಷ್ಯ ನುಡಿದರು.
