
ಉದಯವಾಹಿನಿ, ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ `ದಿ ರಾಜಾಸಾಬ್’ ಸಿನಿಮಾ ಟ್ರೇಲರ್ ಮೂಲಕ ಕೌತುಕ ಸೃಷ್ಟಿಸಿದೆ. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರುವುದರಿಂದ ಹಿಂದಿ ಬೆಲ್ಟ್‌ನಲ್ಲಿಯೂ ಈ ಚಿತ್ರಕ್ಕೆ ದೊಡ್ಡ ಡಿಮಾಂಡ್ ಸೃಷ್ಟಿಯಾಗಿದೆ. ಇದೀಗ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ಬ್ಯೂಸಿಯಾಗಿದೆ. ಅದರಂತೆ ಇದೀಗ ಇದೇ ಚಿತ್ರದ `ರೆಬೆಲ್ ಸಾಬ್’ ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ.
ಪಕ್ಕಾ ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿಬಂದಿರುವ `ರೆಬಲ್ ಸಾಬ್’ ಹಾಡಿನಲ್ಲಿ ನಟ ಪ್ರಭಾಸ್ ಸಖತ್ ಸ್ಟೈಲಿಶ್ ಆಗಿ ಕಂಡಿದ್ದಾರೆ. ಕಲರ್ ಕಲರ್ ಶರ್ಟ್ ಧರಿಸಿ, ಹಾಡಿಗೆ ಮಸ್ತ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ಇಮ್ಮಡಿಯಾಗಿದೆ.
ಅಂದಹಾಗೆ, “ದಿ ರಾಜಾಸಾಬ್” ಸಿನಿಮಾಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ಸಂಯೋಜಕ ಥಮನ್ ಎಸ್. ಆದರೆ, ಈವರೆಗೂ ಇದೇ ಚಿತ್ರದ ಒಂದೇ ಒಂದು ಹಾಡಿನ ಝಲಕ್ ಹೊರಬಿದ್ದಿರಲಿಲ್ಲ. ಇದೀಗ ಅವರ ಥಮನ್ ಮ್ಯೂಸಿಕ್ ಒದಗಿಸಿರೋ “ರೆಬೆಲ್ ಸಾಬ್” ಹಾಡು ಬಿಡುಗಡೆ ಆಗಿದೆ. ಟಿ ಸಿರೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ “ರೆಬೆಲ್ ಸಾಬ್” ಹಾಡು ಹಬ್ಬ ಮಾಡುತ್ತಿದೆ.
