ಉದಯವಾಹಿನಿ, ಬೆಂಗಳೂರು: ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಆಗ್ರಹ ಮಾಡಿದ್ದಾರೆ. ಕಾಂಗ್ರೆಸ್‌ನ ಕುರ್ಚಿ ಗಲಾಟೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ಗೆ ರಾಜ್ಯದ ಆಡಳಿತ ಹಸ್ತಾಂತರ ಮಾಡಬೇಕು. 136 ಸೀಟು ಬರಲು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಶ್ರಮ ಎಲ್ಲಾ ರೀತಿಯಲ್ಲೂ ಇದೆ.
ಒಕ್ಕಲಿಗ ಸಮುದಾಯದ ವೋಟ್ ಕೂಡ ಕಾಂಗ್ರೆಸ್‌ಗೆ ಬಂದಿದೆ. ಕೆ.ಆರ್ ನಗರ ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಒಕ್ಕಲಿಗ ಸಮಾಜದಿಂದ 4-5 ವೋಟ್ ಬರುತ್ತಿತ್ತು. ಈ ಬಾರಿ 15 ಸಾವಿರ ವೋಟ್ ಬಂದಿದೆ ಇದಕ್ಕೆ ಕಾರಣ ನಮ್ಮ ಸಮಾಜದ ಡಿಕೆಶಿ. ಸಿಎಂ ಸ್ಥಾನ ಸಿಗಲಿ, ಸಿಗುತ್ತೆ ಅಂತ ಒಕ್ಕಲಿಗರು ವೋಟ್ ಹಾಕಿದ್ದಾರೆ. ಇವರೆಲ್ಲಾ ಸೇರಿಕೊಂಡಿದ್ದರಿಂದ 136 ಸ್ಥಾನ ಬರಲು ಕಾರಣವಾಯಿತು ಎಂದರು.
ಡಿಕೆ ಶಿವಕುಮಾರ್ ಕೂಡ ನಾಡಿನ ಆಡಳಿತದಲ್ಲಿ ಭಾಗಿಯಾಗಬೇಕು. ಡಿಕೆ ಶಿವಕುಮಾರ್ ನಾನೊಬ್ಬನೇ ಕಾಂಗ್ರೆಸ್‌ಗೆ ಅಧಿಕಾರ ಬರಲು ಕಾರಣ ಅಂತ ಎಲ್ಲೂ ಹೇಳಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ಎಲ್ಲಾ ಜಾತಿ, ಜನಾಂಗ, ಧರ್ಮ, ಭಾಷಿಕರು ವೋಟ್ ಕೊಡಬೇಕು. ಬರೀ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಲೀಡರ್‌ನಿಂದ ಮಾತ್ರ ಅಧಿಕಾರಕ್ಕೆ ಬರೋದಕ್ಕೆ ಆಗಲ್ಲ. ಕೆಲವರು ಯಾವ ಪಕ್ಷದಲ್ಲಿ ಇರಲ್ಲ. ವೋಟ್ ಮಾಡಲ್ವಾ? ನಾಡಿನ ವಿಜಯ, ರಾಜ್ಯದ ವಿಜಯ 136 ಸೀಟು ಬಂತು. ಸಿದ್ದರಾಮಯ್ಯ ಒಬ್ಬರಿಂದ 136 ಸೀಟು ಬಂತಾ ಹಾಗಾದ್ರೆ ಎಂದು ಸಿದ್ದು ವಿರುದ್ಧ ಕಿಡಿಕಾರಿದರು.
