ಉದಯವಾಹಿನಿ, ಮುಂಬೈ: ರೈಲು ನಿಲ್ದಾಣದಲ್ಲಿ ಟಿಕೆಟ್ ಇಲ್ಲದೆ ಓಡಾಟ ಮಾಡುವುದು, ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮ ಗೊತ್ತಿದ್ದರೂ ಕೂಡ ಬಹುತೇಕರು ರೈಲಿನಲ್ಲಿ‌ ಟಿಕೆಟ್ ಪಡೆಯದೆ ಪ್ರಯಾಣ ಮಾಡುತ್ತಾರೆ‌‌. ಹೀಗೆ ತೆರಳಿದ್ದ ಪ್ರಯಾಣಿಕರು ಬಳಿಕ ಚೆಕ್ಕಿಂಗ್ ವೇಳೆ ಸಿಕ್ಕಿಹಾಕಿಕೊಂಡಿದ್ದ ಅನೇಕ ಘಟನೆಯನ್ನು ಕಾಣಬಹುದು. ಅಂತೆಯೇ ರೈಲು ನಿಲ್ದಾಣದಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಆರೋಪದ ಮೇಲೆ ಟಿಕೆಟ್ ಪರೀಕ್ಷಕ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಮೂಲಕ ಸಿಬಂದಿಯ ನಡವಳಿಕೆ ಬಗ್ಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ರೈಲ್ವೆ ಸಿಬ್ಬಂದಿ ನಡವಳಿಕೆ ಮತ್ತು ಪ್ರಯಾಣಿಕರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆಗೆ ಉಂಟಾಗುವಂತೆ ಮಾಡಿದೆ.
ಜನದಟ್ಟಣೆಯಿದ್ದ ರೈಲು ನಿಲ್ದಾಣದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಟಿಕೆಟ್ ಪರೀಕ್ಷಕ (ಟಿಟಿಇ) ಬೆದರಿಸುತ್ತಿರುವ ಮೊಬೈಲ್ ನಲ್ಲಿ ಸೆರೆಯಾದ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದು. ಇನ್ಸ್ಟಾಗ್ರಾಮ್ ‌ನಲ್ಲಿ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ವಾಗ್ವಾದ ಆಗುವ ದೃಶ್ಯಗಳು ಗಮನಿಸಬಹುದು.

Leave a Reply

Your email address will not be published. Required fields are marked *

error: Content is protected !!