ಉದಯವಾಹಿನಿ, ಕೇರಳ: ಗರ್ಭಿಣಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಗಂಡನ ದೌರ್ಜನ್ಯದಿಂದಲೇ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ಮತ್ತು ಅರ್ಚನಾ ಪ್ರೀತಿಸಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಬಳಿಕ ಆತ ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದನು. ಮಾತ್ರವಲ್ಲದೆ ಆಕೆ ತನ್ನ ಕುಟುಂಬದವರೊಂದಿಗೆ ಮಾತನಾಡದಂತೆ ಶರೂನ್ ತಡೆಯುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ ಬುಧವಾರ ಮಧ್ಯಾಹ್ನ ಮನೆಯ ಹಿಂದಿನ ಶೆಡ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ನೀಡಿರುವ ದೂರಿನ ಪ್ರಕಾರ ಶರೂನ್ ನಿರಂತರವಾಗಿ ಅರ್ಚನಾಳ ಮೇಲೆ ಹಲ್ಲೆ ನಡೆಸುತ್ತಿದ್ದನು. ಆಕೆ ತನ್ನ ಕುಟುಂಬದೊಂದಿಗೆ ಮಾತನಾಡದಂತೆ ತಡೆಯುತ್ತಿದ್ದನು ಎನ್ನಲಾಗಿದೆ. 20 ವರ್ಷದವಳಾದ ಅರ್ಚನಾ ಗರ್ಭಿಣಿಯಾಗಿದ್ದಳು. ಬುಧವಾರ ಮಧ್ಯಾಹ್ನ ಆಕೆಯ ಶವ ಗಂಡನ ಮನೆಯ ಹಿಂದಿನ ಶೆಡ್ ನಲ್ಲಿ ಪತ್ತೆಯಾಗಿದೆ. ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅರ್ಚನಾ ಅವರ ಕುಟುಂಬ ನೀಡಿರುವ ದೂರಿನ ಹಿನ್ನಲೆಯಲ್ಲಿ ಆಕೆಯ ಪತಿ ವಿರುದ್ಧ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!