ಉದಯವಾಹಿನಿ, ಗುಜರಾತ್: ದೇಹದ ಎತ್ತರದ ಕಾರಣಕ್ಕಾಗಿ ಎಂಬಿಬಿಎಸ್ ಪ್ರವೇಶ ನಿರಾಕರಿಸಿದರೂ ಛಲ ಬಿಡದೆ ಕನಸು ನನಸಾಗಿಸಿಕೊಂಡ ಗುಜರಾತ್‌ನ ಗಣೇಶ್ ಬಾರೈಯಾ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ವೈದ್ಯನಾಗಬೇಕು ಎನ್ನುವ ಕನಸು ಹೊತ್ತುಕೊಂಡಿದ್ದ ಗಣೇಶ್ ಇದಕ್ಕಾಗಿ ಕಾನೂನು ಹೋರಾಟಗಳನ್ನು ಮಾಡಬೇಕಾಯಿತು. ಅಂತಿಮವಾಗಿ ನ್ಯಾಯಾಲಯ ಇವರ ಪರವಾಗಿ ತೀರ್ಪು ನೀಡಿದ್ದರಿಂದ ಇವರು ತಮ್ಮ ಕನಸನ್ನು ನನಸಾಗಿಸಿಕೊಂಡರು. ಈ ಮೂಲಕ ತಮ್ಮ ಅಂಗವೈಕಲ್ಯತೆಯನ್ನು ಮೀರಿ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ.
ಗುಜರಾತ್ ನ ಗಣೇಶ್ ಬಾರೈಯಾ ಅವರಿಗೆ ವೈದ್ಯನಾಗಬೇಕು ಎನ್ನುವ ಕನಸು ಆದರೆ ದೇಹದ ಗಾತ್ರದ ಕಾರಣಕ್ಕಾಗಿ ಅವರು ತಿರಸ್ಕರಿಸಲ್ಪಟ್ಟರು. ಇದರಿಂದ ಅವರು ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ವೈದ್ಯನಾಗುವ ಕನಸನ್ನು ನನಸಾಗಿಸಲು ಕಾನೂನು ಹೋರಾಟಗಳನ್ನು ಗೆದ್ದ ಬಳಿಕ ಅವರು ಇದೀಗ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎನ್ನುವವರಿಗೆ ಸ್ಫೂರ್ತಿಯಾಗಿದ್ದಾರೆ.

ಗಣೇಶ್ ಬಾರೈಯಾ ಅವರಿಗೆ 2018 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯು ಎಂಬಿಬಿಎಸ್ ಗೆ ಪ್ರವೇಶವನ್ನು ನಿರಾಕರಿಸಿತ್ತು. ಇದಕ್ಕೆ ಮುಖ್ಯ ಕಾರಣ ಅವರ ದೇಹದ ಗಾತ್ರ. ಅವರು ಮೂರು ಅಡಿ ಎತ್ತರವಿದ್ದು ಕುಬ್ಜ ಶರೀರವನ್ನು ಹೊಂದಿದ್ದರು. ಅಲ್ಲದೇ ಕೇವಲ 20 ಕೆಜಿಗಿಂತ ಕಡಿಮೆ ತೂಕವಿದ್ದ ಅವರು ಶೇಕಡಾ 72 ರಷ್ಟು ಲೋಕೋಮೋಟಿವ್ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಎಂಬಿಬಿಎಸ್ ಗೆ ಪ್ರವೇಶವನ್ನು ನಿರಾಕರಿಸಲಾಯಿತು. ಭಾರತೀಯ ವೈದ್ಯಕೀಯ ಮಂಡಳಿ ಅವರ ದೈಹಿಕ ಮಿತಿಗಳನ್ನು ಉಲ್ಲೇಖಿಸಿ ಇದು ವೈದ್ಯನಾಗಿ ಕೆಲಸ ಮಾಡಲು ಅವರಿಗೆ ಅಡ್ಡಿಯಾಗುತ್ತದೆ ಎಂದು ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!