ಉದಯವಾಹಿನಿ, ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಮಾಡಬೇಕು. ಅದಕ್ಕೆ ಈ ಡ್ರಾಮಾ ಇನ್ನೂ ಎರಡು-ಮೂರು ತಿಂಗಳು ನಡೆಯುತ್ತೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಮಾಡಬೇಕು ಅಂತಿದ್ದಾರೆ. ಆದರೆ ಇತ್ತ ಡಿಕೆಶಿ ರೆಕಾರ್ಡ್ ಹೇಗೆ ಬ್ರೇಕ್ ಮಾಡ್ತೀರಾ ನೋಡುತ್ತೇನೆ ಎನ್ನುತ್ತಿದ್ದಾರೆ. ಇಲ್ಲಿ ಇಬ್ಬರ ನಡುವೆ ಸ್ಪರ್ಧೆ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಎರಡೂವರೆ ವರ್ಷ ಯಾವಾಗ ಆಗುತ್ತೆ ಎಂದು ಡಿಕೆಶಿ ಟವಲ್ ಹಾಕಿ ಕುಳಿತುಕೊಂಡಿದ್ದರು. ಈಗ ಎರಡೂವರೆ ವರ್ಷ ಆದ ತಕ್ಷಣ ಕೆಲವರನ್ನ ದೆಹಲಿಗೆ, ಮುಂಬೈಗೆ ಹಾಗೂ ರೆಸಾರ್ಟ್‌ಗೆ ಡಿನ್ನರ್‌ಗಾಗಿ ಕಳುಹಿಸಿದರು. ಇವತ್ತು ನೋಡಿದ್ರೆ ಡಿಸಿಎಂ ಅವರೇ ಸಿಎಂ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
