ಉದಯವಾಹಿನಿ, ಮಡಿಕೇರಿ: ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿದ್ದ ಗೊಂದಲಗಳಿಗೆ ಸಿಎಂ-ಡಿಸಿಎಂ ತೆರೆ ಎಳೆದಿದ್ದರೂ ಅಭಿಮಾನಿಗಳು ತಮ್ಮ ನಾಯಕರನ್ನ ಬೆಂಬಲಿಸೋದನ್ನ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪರ ನಾಯಕರು ಅವ್ರೇ ಸಿಎಂ ಆಗಿ ಮುಂದುವರಿಯಲಿ ಅಂದ್ರೆ, ಡಿಕೆಶಿ ಬೆಂಬಲಿತರು ಸಿಎಂ ಸ್ಥಾನ ಸಿಗಲಿ ಅಂತ ವಿಶೇಷ ಪೂಜೆ, ಹೋಮಗಳನ್ನ ನೆರವೇರಿಸಿದ್ದಾರೆ. ಈ ನಡುವೆ ಡಿಕೆಶಿ ಸಿಎಂ ಆಗಲೆಂದು ಅಭಿಮಾನಿಗಳು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೋಪ್ಪ ಸೇತುವೆ ಬಳಿ ಇರುವ ಕಾವೇರಿ ಪ್ರತಿಮೆ ಬಳಿ ಕೊಡಗಿನ ಡಿಕೆಶಿ ಅಭಿಮಾನಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತಾನಾಡಿದ ಡಿಕೆಶಿ ಅಭಿಮಾನಿ ಬಳಗದ ಅದ್ಯಕ್ಷ. ಮೈಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಡಿ.ಕೆ ಶಿವಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆ ರಾಜ್ಯದ ನಾನಾ ಭಾಗದಲ್ಲೂ ಅಭಿಮಾನಿಗಳ ಸಂಘ ಇದೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ಕಾಲ ಸಿಎಂ ಅಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಡಿಕೆ ಶಿವಕುಮಾರ್ ಅವರಿಗೂ ಅವಕಾಶ ಕಲ್ಪಿಸಬೇಕು. ಅಭಿವೃದ್ಧಿ ಕೆಲಸಗಳನ್ನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ
